Learn with Anil · KEA FDA & SDA PYQsPractise online →Subscribe ₹149

KEA FDA SDA General Kannada previous year questions with answers

Every General Kannada question asked in the KEA FDA & SDA papers on this site, grouped by topic. Answers come from KEA's revised (final) keys; each has a short explanation (free here for a sample, all of them in the practice app).

ಕೆಇಎ ಎಫ್‌ಡಿಎ ಎಸ್‌ಡಿಎ ಸಾಮಾನ್ಯ ಕನ್ನಡ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise General Kannada online

Grammar

  1. FDA Jan 2026 · P2 · Q1 · General Kannada · Grammar

    ಈ ಕೆಳಗಿನವುಗಳಲ್ಲಿ ಲಿಂಗ ಮತ್ತು ಪ್ರತ್ಯಯಗಳಿಗೆ ಅನುಗುಣವಾಗಿ ಹೊಂದಾಣಿಕೆ ಆಗದಿರುವುದನ್ನು ಗುರುತಿಸಿ.

    1. ಗುಣವಾಚಕ - ಒಳ್ಳಿದನ್, ಒಳ್ಳಿದಳ್, ಒಳ್ಳಿತು
    2. ಸರ್ವನಾಮ - ಅದು, ಅವನ್, ಅವಳ್
    3. ಸಂಖ್ಯಾವಾಚಕ - ಒಂದು, ಒರ್ವನ್, ಒರ್ವಳ್
    4. ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು
    Show answer

    Answer: (4) ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು

    Old Kannada words change their suffix with gender: guṇavācaka ಒಳ್ಳಿದನ್/ಒಳ್ಳಿದಳ್/ಒಳ್ಳಿತು (good man/woman/thing), pronouns ಅವನ್/ಅವಳ್/ಅದು, numerals ಒರ್ವನ್/ಒರ್ವಳ್/ಒಂದು. ಎಳೆಯನ್ (young man), ಪೊಲ್ಲನ್ (bad man), ಪೆಱತು (another thing) describe a person or thing and express no quantity; parimāṇavācakas are words like ಅನಿತು, ಎನಿತು, ಕೆಲವು, ಪಲವು. So option 4 is the mismatch.

    ಹಳಗನ್ನಡದಲ್ಲಿ ಲಿಂಗಕ್ಕೆ ತಕ್ಕಂತೆ ಪ್ರತ್ಯಯ ಬದಲಾಗುತ್ತದೆ: ಗುಣವಾಚಕ – ಒಳ್ಳಿದನ್ (ಪುಂ), ಒಳ್ಳಿದಳ್ (ಸ್ತ್ರೀ), ಒಳ್ಳಿತು (ನಪುಂ); ಸರ್ವನಾಮ – ಅವನ್, ಅವಳ್, ಅದು; ಸಂಖ್ಯಾವಾಚಕ – ಒರ್ವನ್, ಒರ್ವಳ್, ಒಂದು. ಆದರೆ ಎಳೆಯನ್, ಪೊಲ್ಲನ್, ಪೆಱತು ಇವು ಪರಿಮಾಣವನ್ನು ಸೂಚಿಸುವುದಿಲ್ಲ; ಪರಿಮಾಣವಾಚಕಗಳು – ಅನಿತು, ಇನಿತು, ಎನಿತು, ಕೆಲವು, ಪಲವು. ಆದ್ದರಿಂದ ಆಯ್ಕೆ 4 ಹೊಂದಾಣಿಕೆಯಾಗುವುದಿಲ್ಲ.

  2. FDA Jan 2026 · P2 · Q2 · General Kannada · Grammar

    ಕನ್ನಡದಲ್ಲಿ ಲಿಂಗವು ಅರ್ಥವನ್ನು ಅನುಸರಿಸುವುದರಿಂದ ಮೂಲದಲ್ಲಿ ಅದು ಈ ಕೆಳಗಿನದರಿಂದ ಸೂಚಿತವಾಗುವುದು.

    1. ಪ್ರತ್ಯಯ
    2. ಪ್ರಕೃತಿ ಪ್ರತ್ಯಯ
    3. ಪ್ರಕೃತಿ
    4. ಧಾತು
    Show answer

    Answer: (3) ಪ್ರಕೃತಿ

    In Kannada gender is 'arthānusāri' – it follows meaning. The noun stem (prakṛti) itself, by what it denotes, decides the gender: ಗಂಡಸು (masculine), ಹೆಂಗಸು (feminine), ಮರ (neuter). Suffixes are added only according to that, so at root gender is shown by the prakṛti.

    ಕನ್ನಡದಲ್ಲಿ ಲಿಂಗವು ಅರ್ಥಾನುಸಾರಿ – ಪದದ ಅರ್ಥವೇ ಲಿಂಗವನ್ನು ನಿರ್ಧರಿಸುತ್ತದೆ. ಉದಾ: ಗಂಡಸು (ಪುಲ್ಲಿಂಗ), ಹೆಂಗಸು (ಸ್ತ್ರೀಲಿಂಗ), ಮರ (ನಪುಂಸಕಲಿಂಗ). ಹೀಗೆ ಮೂಲದಲ್ಲಿ ನಾಮಪ್ರಕೃತಿಯೇ ಲಿಂಗವನ್ನು ಸೂಚಿಸುತ್ತದೆ; ಪ್ರತ್ಯಯಗಳು ಅದನ್ನು ಅನುಸರಿಸಿ ಸೇರುತ್ತವೆ.

  3. FDA Jan 2026 · P2 · Q7 · General Kannada · Grammar

    ಯೋಗವಾಹಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ? (ಎ) ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಬಹುದು. (ಬಿ) ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವುದಿಲ್ಲ. (ಸಿ) ಯೋಗವಾಹಗಳನ್ನು ಸ್ವರಾಕ್ಷರಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು. (ಡಿ) ಯೋಗವಾಹಗಳನ್ನು ವ್ಯಂಜನಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು.

    1. ಎ ಮತ್ತು ಬಿ ಸರಿ
    2. ಬಿ ಮತ್ತು ಡಿ ಸರಿ
    3. ಎ ಮತ್ತು ಸಿ ಸರಿ
    4. ಬಿ ಮತ್ತು ಸಿ ಸರಿ
    Show answer

    Answer: (4) ಬಿ ಮತ್ತು ಸಿ ಸರಿ

    The yogavāhas – anusvāra (ಂ) and visarga (ಃ) – have no independent sound; they are always pronounced riding on a vowel (ಅಂ, ಅಃ; even in ಕಂ the ಂ follows the vowel ಅ). So (b) and (c) are correct; (a) contradicts (b) and (d) is wrong.

    ಅನುಸ್ವಾರ (ಂ) ಮತ್ತು ವಿಸರ್ಗ (ಃ) ಎಂಬ ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಬರುವುದಿಲ್ಲ; ಅವು ಯಾವಾಗಲೂ ಸ್ವರದ ಆಶ್ರಯದಿಂದಲೇ (ಅಂ, ಅಃ) ಉಚ್ಚರಿಸಲ್ಪಡುತ್ತವೆ. ಆದ್ದರಿಂದ (ಬಿ) ಮತ್ತು (ಸಿ) ಸರಿ; (ಎ) ಮತ್ತು (ಡಿ) ತಪ್ಪು.

  4. FDA Jan 2026 · P2 · Q8 · General Kannada · Grammar

    ಹೇಳಿಕೆ-I : ಕನ್ನಡವೂ ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣ ವರ್ಣಗಳು ಸ್ವಾಭಾವಿಕವಾಗಿ ಕಂಡು ಬರುತ್ತವೆ. ಹೇಳಿಕೆ-II : ಆದರೆ ಸಂಸ್ಕೃತ ಪ್ರಾಕೃತ ಶಬ್ದಗಳನ್ನು ಸ್ವೀಕರಿಸುವಾಗಲೂ ಅನುಕರಣೆಯ ಶಬ್ದಗಳಲ್ಲಿ ಭಾವತೀವ್ರತೆಯ ಕಾರಣದಿಂದಲೂ ಅವನ್ನು ಬಳಸುವುದು ರೂಢಿಯಲ್ಲಿದೆ. ಈ ಮೇಲಿನ ಹೇಳಿಕೆಗಳನ್ನು ಗಮನಿಸಿ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರ ಆರಿಸಿ.

    1. ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ
    2. ಹೇಳಿಕೆ-I ಮತ್ತು ಹೇಳಿಕೆ-II ಎರಡೂ ತಪ್ಪು
    3. ಹೇಳಿಕೆ-I ತಪ್ಪು, ಹೇಳಿಕೆ-II ಸರಿ
    4. ಹೇಳಿಕೆ-I ಸರಿ ಮತ್ತು ಹೇಳಿಕೆ-II ತಪ್ಪು
    Show answer

    Answer: (3) ಹೇಳಿಕೆ-I ತಪ್ಪು, ಹೇಳಿಕೆ-II ಸರಿ

    Aspirated letters (mahāprāṇa: ಖ, ಘ, ಛ, ಧ, ಭ …) are not native to Kannada or other Dravidian languages, so Statement I is wrong. They are used in borrowed Sanskrit/Prakrit words (ಭಾಷೆ, ಧರ್ಮ) and, for emphasis, in onomatopoeic words (ಛೀ, ಥೂ, ಢಂ), so Statement II is right.

    ಖ, ಘ, ಛ, ಧ, ಭ ಮೊದಲಾದ ಮಹಾಪ್ರಾಣಗಳು ಕನ್ನಡ ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಸ್ವಾಭಾವಿಕವಾಗಿ ಇಲ್ಲ – ಹೇಳಿಕೆ-I ತಪ್ಪು. ಸಂಸ್ಕೃತ-ಪ್ರಾಕೃತದಿಂದ ಬಂದ ಪದಗಳಲ್ಲಿ (ಭಾಷೆ, ಧರ್ಮ) ಹಾಗೂ ಭಾವತೀವ್ರತೆಗಾಗಿ ಅನುಕರಣ ಶಬ್ದಗಳಲ್ಲಿ (ಛೀ, ಥೂ, ಢಂ) ಅವುಗಳ ಬಳಕೆ ರೂಢಿಯಲ್ಲಿದೆ – ಹೇಳಿಕೆ-II ಸರಿ.

  5. FDA Jan 2026 · P2 · Q10 · General Kannada · Grammar

    ‘ಶಾಲೆಯಲ್ಲ ಇದು ವಿದ್ಯಾ ದೇಗುಲ’ - ಇಲ್ಲಿರುವ ಅಲಂಕಾರವನ್ನು ಗುರುತಿಸಿ.

    1. ರೂಪಕ
    2. ದೃಷ್ಟಾಂತ
    3. ಅಪಹ್ನುತಿ
    4. ಯಮಕ
    Show answer

    Answer: (1) ರೂಪಕ

    KEA's final key is rūpaka: the school (upamēya) is identified outright with a 'temple of learning' (upamāna) with no word of comparison; Daṇḍin's Kāvyādarśa even counts this 'not X but Y' pattern as a kind of rūpaka (tattvāpahnava-rūpaka). Most Kannada grammar books, however, call denying the upamēya to assert the upamāna apahnuti (option 3), which was KEA's provisional key. (Official KEA key; some sources differ.)

    ಕೆಇಎ ಅಂತಿಮ ಕೀ ಪ್ರಕಾರ ರೂಪಕ: ಉಪಮೇಯವಾದ ಶಾಲೆಗೂ ಉಪಮಾನವಾದ 'ವಿದ್ಯಾ ದೇಗುಲ'ಕ್ಕೂ ಅಭೇದವನ್ನು ಆರೋಪಿಸಲಾಗಿದೆ; ದಂಡಿಯ ಕಾವ್ಯಾದರ್ಶವು 'ಇದು ಅದಲ್ಲ, ಇದು' ಎಂಬ ರಚನೆಯನ್ನು ರೂಪಕದ ಒಂದು ಬಗೆ (ತತ್ತ್ವಾಪಹ್ನವ ರೂಪಕ) ಎನ್ನುತ್ತದೆ. ಆದರೆ ಉಪಮೇಯವನ್ನು ನಿರಾಕರಿಸಿ ('ಶಾಲೆಯಲ್ಲ') ಉಪಮಾನವನ್ನು ಸ್ಥಾಪಿಸುವುದನ್ನು ಬಹುತೇಕ ವ್ಯಾಕರಣ ಪುಸ್ತಕಗಳು ಅಪಹ್ನುತಿ ಎನ್ನುತ್ತವೆ; ತಾತ್ಕಾಲಿಕ ಕೀ ಉತ್ತರವೂ ಅದೇ (ಆಯ್ಕೆ 3) ಆಗಿತ್ತು. (ಕೆಇಎ ಅಧಿಕೃತ ಕೀ ಉತ್ತರ; ಕೆಲವು ಮೂಲಗಳಲ್ಲಿ ಭಿನ್ನವಾಗಿದೆ.)

  6. FDA Jan 2026 · P2 · Q13 · General Kannada · Grammar

    ಕೆಳಗಿನ ಯಾವುದು ಕನ್ನಡ ವ್ಯಂಜನ ಸಂಧಿಗೆ ಉದಾಹರಣೆಯಲ್ಲ?

    1. ನೀರ್ವೊನಲ್
    2. ಕಣ್ಬೇಟ
    3. ನುಣ್ಚರ
    4. ಎಳವಳ್ಳಿ
    Show answer

    Answer: (2) ಕಣ್ಬೇಟ

    Explanation: open it in the practice app. It needs the ₹149 All-in-One Pass: one payment for every exam on the site.

  7. FDA Jan 2026 · P2 · Q14 · General Kannada · Grammar

    ಈ ಕೆಳಗಿನ ಯಾವ ಪದಗಳಲ್ಲಿ ಸಂಧಿಕಾರ್ಯ ಸಾಧ್ಯವಾಗಿಲ್ಲ, ಗುರುತಿಸಿ. (a) ಮೆಲ್ವಾಸು (b) ಬಾಯ್ಸವಿ (c) ಬೆಳ್ಸರಿ (d) ಪೊಂಜುರಿಗೆ

    1. (d) ಮಾತ್ರ
    2. (d) ಮತ್ತು (a)
    3. (a) ಮತ್ತು (b)
    4. (b) ಮತ್ತು (c)
    Show answer

    Answer: (4) (b) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  8. FDA Jan 2026 · P2 · Q15 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಜಶ್ತ್ವ ಸಂಧಿ — (i) ಕಮ್ಮನಿ (b) ಶ್ಚುತ್ವ ಸಂಧಿ — (ii) ಸತ್ಸಂಗ (c) ಅನುನಾಸಿಕ ಸಂಧಿ — (iii) ಮನಶ್ಚಪಲ (d) ಪ್ರಕೃತಿ ಭಾವ — (iv) ಅಜಾದಿ ಸಂಕೇತಗಳು :

    1. a-iv, b-iii, c-i, d-ii
    2. a-iii, b-iv, c-i, d-ii
    3. a-iv, b-iii, c-ii, d-i
    4. a-ii, b-iii, c-iv, d-i
    Show answer

    Answer: (1) a-iv, b-iii, c-i, d-ii

    Explanation: open it in the practice app. It needs the ₹149 All-in-One Pass: one payment for every exam on the site.

  9. FDA Jan 2026 · P2 · Q16 · General Kannada · Grammar

    ‘ನದ್ಯುದಕ’ ಸಂಧಿ ಪದವನ್ನು ಬಿಡಿಸುವ ಸರಿಯಾದ ಕ್ರಮ

    1. ನದ್ + ಉದಕ
    2. ನತ್ + ಉದಕ
    3. ನದಿ + ಉದಕ
    4. ನದ್ಯ + ಉದಕ
    Show answer

    Answer: (3) ನದಿ + ಉದಕ

    Explanation: open it in the practice app. It needs the ₹149 All-in-One Pass: one payment for every exam on the site.

  10. FDA Jan 2026 · P2 · Q17 · General Kannada · Grammar

    ಕೆಳಗೆ ನೀಡಿರುವ ಸಂಧಿ ಪದಗಳಲ್ಲಿ ಸಂಸ್ಕೃತ ಸ್ವರ ಸಂಧಿಗಳಲ್ಲದವನ್ನು ಗುರುತಿಸಿ. (a) ಗ್ರಾಮೋದ್ಧಾರ (b) ಪ್ರಾಗೈತಿಹಾಸ (c) ಹೃನ್ಮಂದಿರ (d) ಪ್ರಥಮೈಕಾದಶಿ

    1. (d) ಮಾತ್ರ
    2. (a) ಮತ್ತು (d)
    3. (b) ಮತ್ತು (c)
    4. (c) ಮತ್ತು (d)
    Show answer

    Answer: (3) (b) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  11. FDA Jan 2026 · P2 · Q18 · General Kannada · Grammar

    ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಅವನು — (i) ಉತ್ತಮ ಪುರುಷ ಏಕವಚನ (b) ಅವು — (ii) ಪ್ರಥಮ ಪುರುಷ ಬಹುವಚನ (c) ನಾನು — (iii) ಮಧ್ಯಮ ಪುರುಷ ಬಹುವಚನ (d) ನೀವು — (iv) ಪ್ರಥಮ ಪುರುಷ ಏಕವಚನ ಸಂಕೇತಗಳು :

    1. a-iii, b-ii, c-iv, d-i
    2. a-iv, b-i, c-iii, d-ii
    3. a-i, b-iv, c-ii, d-iii
    4. a-iv, b-ii, c-i, d-iii
    Show answer

    Answer: (4) a-iv, b-ii, c-i, d-iii

    Explanation: open it in the practice app. It needs the ₹149 All-in-One Pass: one payment for every exam on the site.

  12. FDA Jan 2026 · P2 · Q19 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಪರಿಮಾಣ ವಾಚಕ — (i) ಎಂಥ (b) ಪ್ರಕಾರ ವಾಚಕ — (ii) ಮರ (c) ದಿಗ್ವಾಚಕ — (iii) ಕೆಲವು (d) ವಸ್ತು ವಾಚಕ — (iv) ಎಡ ಸಂಕೇತಗಳು :

    1. a-iii, b-i, c-iv, d-ii
    2. a-i, b-iv, c-ii, d-iii
    3. a-iii, b-iv, c-i, d-ii
    4. a-ii, b-i, c-iv, d-iii
    Show answer

    Answer: (1) a-iii, b-i, c-iv, d-ii

    Explanation: open it in the practice app. It needs the ₹149 All-in-One Pass: one payment for every exam on the site.

  13. FDA Jan 2026 · P2 · Q20 · General Kannada · Grammar

    ಈ ಕೆಳಗಿನ ಯಾವ ಜೋಡಿ/ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿಲ್ಲ ? (a) ತದ್ಧಿತ ಭಾವನಾಮ - ಕಲಿತನ (b) ಸ್ತ್ರೀಲಿಂಗ ತದ್ಧಿತ ಪ್ರತ್ಯಯ - ಕೆಳದಿ (c) ವಿಧ್ಯರ್ಥ - ಪೋಗಿಮ್ (d) ಪ್ರತಿಷೇಧಾರ್ಥ - ಒಡೆಯ

    1. (a) ಮತ್ತು (b)
    2. (b) ಮತ್ತು (d)
    3. (c) ಮಾತ್ರ
    4. (d) ಮಾತ್ರ
    Show answer

    Answer: (4) (d) ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  14. FDA Jan 2026 · P2 · Q25 · General Kannada · Grammar

    ಹೊಂದಿಸಿ ಬರೆಯಿರಿ. ಛಂದಸ್ಸು — ಮಾತ್ರಾ ವಿನ್ಯಾಸ (a) ಭಾಮಿನಿ ಷಟ್ಪದಿ — (i) 5 5 / 5 5 / 5 5 5 ಗುರು (b) ವಾರ್ಧಕ ಷಟ್ಪದಿ — (ii) 5 5 5 5 / 5 5 5 5 / 5 5 5 5 5 5 ಗುರು (c) ಕುಸುಮ ಷಟ್ಪದಿ — (iii) 3 3 3 3 / 3 3 3 3 / 3 3 3 3 3 3 ಗುರು (d) ಭೋಗ ಷಟ್ಪದಿ — (iv) 3 4 3 4 / 3 4 3 4 / 3 4 3 4 3 4 ಗುರು ಸಂಕೇತಗಳು :

    1. a-iv, b-ii, c-iii, d-i
    2. a-iv, b-iii, c-ii, d-i
    3. a-iv, b-ii, c-i, d-iii
    4. a-iv, b-i, c-ii, d-iii
    Show answer

    Answer: (3) a-iv, b-ii, c-i, d-iii

    Explanation: open it in the practice app. It needs the ₹149 All-in-One Pass: one payment for every exam on the site.

  15. FDA Jan 2026 · P2 · Q26 · General Kannada · Grammar

    ಪೂರ್ಣ ವರ್ತಮಾನಕಾಲವನ್ನು ಸೂಚಿಸುವ ಕ್ರಿಯಾಪದವನ್ನು ಗುರುತಿಸಿ.

    1. ತಿಂದಿರುವನು
    2. ತಿಂದಿದ್ದಾನೆ
    3. ತಿಂದಿದ್ದನು
    4. ತಿನ್ನುತ್ತಿರಬಹುದು
    Show answer

    Answer: (2) ತಿಂದಿದ್ದಾನೆ

    Explanation: open it in the practice app. It needs the ₹149 All-in-One Pass: one payment for every exam on the site.

  16. FDA Jan 2026 · P2 · Q27 · General Kannada · Grammar

    ಕ್ರಿಯೆಗೆ ಸಂಬಂಧಿಸಿದ ಕಾರಕಾರ್ಥವನ್ನು ಹೊಂದಿಲ್ಲದ ವಿಭಕ್ತಿಗಳು ಯಾವುವು?

    1. ಪ್ರಥಮಾ, ತೃತೀಯಾ
    2. ಷಷ್ಠೀ, ಸಂಬೋಧನಾ
    3. ಪಂಚಮೀ, ಸಪ್ತಮೀ
    4. ದ್ವಿತೀಯಾ, ಚತುರ್ಥಿ
    Show answer

    Answer: (2) ಷಷ್ಠೀ, ಸಂಬೋಧನಾ

    Explanation: open it in the practice app. It needs the ₹149 All-in-One Pass: one payment for every exam on the site.

  17. FDA Jan 2026 · P2 · Q31 · General Kannada · Grammar

    ‘ರಾಮನು ಹಣ್ಣನ್ನು ತಿನ್ನುತ್ತಾನೆ’ - ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಕ್ರಿಯಾಪದವನ್ನು ಗುರುತಿಸಿ. (ಅಡಿಗೆರೆ ಎಳೆದ ಪದ: ಹಣ್ಣನ್ನು)

    1. ಅಕರ್ಮಕ ಕ್ರಿಯಾಪದ
    2. ಸಕರ್ಮಕ ಕ್ರಿಯಾಪದ
    3. ನಿಷೇಧಾರ್ಥಕ ಕ್ರಿಯಾಪದ
    4. ವಿಧ್ಯರ್ಥಕ ಕ್ರಿಯಾಪದ
    Show answer

    Answer: (2) ಸಕರ್ಮಕ ಕ್ರಿಯಾಪದ

    Explanation: open it in the practice app. It needs the ₹149 All-in-One Pass: one payment for every exam on the site.

  18. FDA Jan 2026 · P2 · Q33 · General Kannada · Grammar

    ‘ದ್ವಿತ್ವ’ ಎಂಬುದಕ್ಕೆ ಸರಿಯಾದ ವಿವರಣೆ ಎಂದರೆ:

    1. ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
    2. ಒಂದೇ ಜಾತಿಯ ಎರಡು ಸ್ವರಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
    3. ಒಂದೇ ಜಾತಿಯ ಎರಡು ಒತ್ತಕ್ಷರಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
    4. ಒಂದೇ ಜಾತಿಯ ಮಹಾ ಪ್ರಾಣಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
    Show answer

    Answer: (1) ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ದ್ವಿತ್ವವೆನ್ನುವರು.

    Explanation: open it in the practice app. It needs the ₹149 All-in-One Pass: one payment for every exam on the site.

  19. FDA Jan 2026 · P2 · Q35 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಸವರ್ಣದೀರ್ಘ ಸಂಧಿ — (i) ಹಿತೌಷ್ಣ್ಯ (b) ಗುಣ ಸಂಧಿ — (ii) ಬಹೂರ್ಜಿತ (c) ವೃದ್ಧಿ ಸಂಧಿ — (iii) ಭ್ರಾತ್ರಂಶ (d) ಯಣ್ ಸಂಧಿ — (iv) ಕಾಳೋರಗ ಸಂಕೇತಗಳು :

    1. a-ii, b-iv, c-iii, d-i
    2. a-ii, b-iv c-i, d-iii
    3. a-iv, b-i, c-iii, d-ii
    4. a-iii, b-iv, c-ii, d-i
    Show answer

    Answer: (2) a-ii, b-iv c-i, d-iii

    Explanation: open it in the practice app. It needs the ₹149 All-in-One Pass: one payment for every exam on the site.

  20. SDA Jan 2026 · P2 · Q4 · General Kannada · Grammar

    ಈ ಕೆಳಗಿನವುಗಳಲ್ಲಿ ಉಪಮಾಲಂಕಾರ ಅಲ್ಲದೇ ಇರುವುದನ್ನು ಗುರುತಿಸಿ

    1. ಹಲ್ಲಿಲ್ಲದ ಬಾಯಿ ಇಲಿಯ ಬಿಲದಂತೆ
    2. ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
    3. ಹುಟ್ಟು ಇಲ್ಲದ ಹರಿಗೋಲ ಸೇರಿದಂತೆ
    4. ಮಗುವಿನ ಮುಖ ಕಮಲ ಅರಳಿತು
    Show answer

    Answer: (4) ಮಗುವಿನ ಮುಖ ಕಮಲ ಅರಳಿತು

    Upamā (simile) compares two things with a word of likeness such as '-ante' (like): 'like a rat's hole', 'like the moon rising', 'like boarding a coracle without an oar'. 'Maguvina mukha kamala aralitu' (the child's face-lotus bloomed) identifies the face with the lotus without any comparing word – that is rūpaka (metaphor), not upamā.

    ಉಪಮಾಲಂಕಾರದಲ್ಲಿ ಉಪಮೇಯ–ಉಪಮಾನಗಳನ್ನು 'ಅಂತೆ' ಮುಂತಾದ ಉಪಮಾವಾಚಕದಿಂದ ಹೋಲಿಸಲಾಗುತ್ತದೆ: 'ಬಿಲದಂತೆ', 'ಬಂದಂತೆ', 'ಸೇರಿದಂತೆ'. 'ಮಗುವಿನ ಮುಖ ಕಮಲ ಅರಳಿತು' ಎಂಬಲ್ಲಿ ಮುಖವನ್ನೇ ಕಮಲವೆಂದು ಅಭೇದವಾಗಿ ಆರೋಪಿಸಲಾಗಿದೆ; ಉಪಮಾವಾಚಕವಿಲ್ಲ. ಇದು ರೂಪಕಾಲಂಕಾರ, ಉಪಮೆ ಅಲ್ಲ.

  21. SDA Jan 2026 · P2 · Q5 · General Kannada · Grammar

    “ಊರು ಉಪಕಾರ ಅರಿಯದು : ಹೆಣ ಶೃಂಗಾರ ಅರಿಯದು” ಇಲ್ಲಿರುವ ಅಲಂಕಾರ ಯಾವುದು ?

    1. ದೃಷ್ಟಾಂತಾಲಂಕಾರ
    2. ರೂಪಕಾಲಂಕಾರ
    3. ದೀಪಕಾಲಂಕಾರ
    4. ಶ್ಲೇಷಾಲಂಕಾರ
    Show answer

    Answer: (1) ದೃಷ್ಟಾಂತಾಲಂಕಾರ

    In dṛṣṭānta (exemplification) a statement is followed by a parallel example, with no word of comparison, so that the two mirror each other (bimba–pratibimba). 'A village does not know gratitude' is illustrated by 'a corpse does not know adornment'.

    ಉಪಮೇಯ ವಾಕ್ಯ ಮತ್ತು ಉಪಮಾನ ವಾಕ್ಯಗಳು ಉಪಮಾವಾಚಕವಿಲ್ಲದೆ ಬಿಂಬ–ಪ್ರತಿಬಿಂಬ ಭಾವದಲ್ಲಿ ಬಂದರೆ ಅದು ದೃಷ್ಟಾಂತಾಲಂಕಾರ. 'ಊರು ಉಪಕಾರ ಅರಿಯದು' ಎಂಬ ಮಾತಿಗೆ 'ಹೆಣ ಶೃಂಗಾರ ಅರಿಯದು' ಎಂಬುದು ದೃಷ್ಟಾಂತವಾಗಿ ಬಂದಿದೆ.

  22. SDA Jan 2026 · P2 · Q7 · General Kannada · Grammar

    ‘ಅಷ್ಟು ದೊಡ್ಡಕಲ್ಲು’ - ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ನಾಮವಾಚವನ್ನು ಗುರುತಿಸಿ. (ಅಡಿಗೆರೆ ಎಳೆದ ಪದ: ಅಷ್ಟು)

    1. ಪರಿಮಾಣವಾಚಕ
    2. ದಿಗ್ವಾಚಕ
    3. ಸಂಖ್ಯಾವಾಚಕ
    4. ಗುಣವಾಚಕ
    Show answer

    Answer: (1) ಪರಿಮಾಣವಾಚಕ

    'Aṣṭu' (that much) expresses an indefinite quantity or measure, so it is a parimāṇavācaka (word of quantity), like ಇಷ್ಟು, ಎಷ್ಟು, ಅನಿತು, ಹಲವು. It is not a number (saṅkhyāvācaka) or a quality (guṇavācaka).

    'ಅಷ್ಟು' ಎಂಬುದು ನಿರ್ದಿಷ್ಟ ಸಂಖ್ಯೆಯನ್ನಲ್ಲದೆ ಪ್ರಮಾಣ/ಅಳತೆಯನ್ನು ಸೂಚಿಸುತ್ತದೆ. ಇಷ್ಟು, ಎಷ್ಟು, ಅನಿತು, ಹಲವು, ಕೆಲವು ಮೊದಲಾದವುಗಳಂತೆ ಇದು ಪರಿಮಾಣವಾಚಕ. ಇದು ಸಂಖ್ಯಾವಾಚಕವೂ ಅಲ್ಲ, ಗುಣವಾಚಕವೂ ಅಲ್ಲ.

  23. SDA Jan 2026 · P2 · Q8 · General Kannada · Grammar

    ಕೆಳಗೆ ನೀಡಿರುವ ಸಂಧಿ ಪದಗಳಲ್ಲಿ ಸವರ್ಣದೀರ್ಘ ಸಂಧಿಗೆ ಉದಾಹರಣೆಯಾಗಿರುವ ಸರಿಯಾದ ಗುಂಪನ್ನು ಗುರುತಿಸಿ

    1. ಲೋಕೋತ್ತರ, ಆರ್ಯೋಕ್ತಿ, ಗುರೂಪದೇಶ, ಬಹೂರ್ಜಿತ
    2. ಕರತಲಾಮಲಕ, ಲಕ್ಷೀಂದ್ರ, ವಿದ್ಯಾರ್ಥಿ, ಮೃದೂಕ್ತಿ
    3. ಚರಣಾರವಿಂದ, ಧರ್ಮೋಪದೇಶ, ಸ್ವೋಪಜ್ಞತೆ, ಚಿದಾನಂದ
    4. ಪದ್ಮಾಸನ, ಕಾಂಚನಾದ್ರಿ, ಭೂಮೀಶ, ಲೋಕೇಶ
    Show answer

    Answer: (2) ಕರತಲಾಮಲಕ, ಲಕ್ಷೀಂದ್ರ, ವಿದ್ಯಾರ್ಥಿ, ಮೃದೂಕ್ತಿ

    Savarṇadīrgha: two like vowels merge into one long vowel. Option 2 is entirely such: karatala+āmalaka, lakṣmī+indra, vidyā+arthi, mṛdu+ukti. The others are mixed with guṇa sandhi (loka+uttara, ārya+ukti, dharma+upadeśa, sva+upajñate, loka+īśa) or jaśtva sandhi (cit+ānanda).

    ಸವರ್ಣ ಸ್ವರಗಳು ಸೇರಿ ದೀರ್ಘವಾಗುವುದು ಸವರ್ಣದೀರ್ಘ ಸಂಧಿ. ಕರತಲ+ಆಮಲಕ, ಲಕ್ಷ್ಮೀ+ಇಂದ್ರ, ವಿದ್ಯಾ+ಅರ್ಥಿ, ಮೃದು+ಉಕ್ತಿ – ಎಲ್ಲವೂ ಸವರ್ಣದೀರ್ಘ. ಉಳಿದ ಗುಂಪುಗಳಲ್ಲಿ ಗುಣ ಸಂಧಿ (ಲೋಕ+ಉತ್ತರ, ಆರ್ಯ+ಉಕ್ತಿ, ಧರ್ಮ+ಉಪದೇಶ, ಸ್ವ+ಉಪಜ್ಞತೆ, ಲೋಕ+ಈಶ) ಮತ್ತು ಜಶ್ತ್ವ ಸಂಧಿ (ಚಿತ್+ಆನಂದ) ಬೆರೆತಿವೆ.

  24. SDA Jan 2026 · P2 · Q9 · General Kannada · Grammar

    ‘ಕ್ರಿಯೆ ನಡೆದಿಲ್ಲ’ ಎಂಬುದನ್ನು ಸೂಚಿಸುವ ಕ್ರಿಯಾಪದಗಳ ಹೆಸರೇನು ?

    1. ಸಂಭಾವನಾರ್ಥಕ ಕ್ರಿಯಾಪದಗಳು
    2. ನಿಷೇಧಾರ್ಥಕ ಕ್ರಿಯಾಪದಗಳು
    3. ವಿಧ್ಯರ್ಥಕ ಕ್ರಿಯಾಪದಗಳು
    4. ಕಾಲಾರ್ಥಕ ಕ್ರಿಯಾಪದಗಳು
    Show answer

    Answer: (2) ನಿಷೇಧಾರ್ಥಕ ಕ್ರಿಯಾಪದಗಳು

    Verbs that say an action does not/did not happen are niṣēdhārthaka (negative) verbs, e.g. māḍanu, bareyaḷu, hōgaru. Sambhāvanārthaka verbs express possibility (māḍiyānu), vidhyarthaka verbs command or wish (māḍali), and kālārthaka verbs show tense.

    ಕ್ರಿಯೆ ನಡೆಯುವುದಿಲ್ಲ/ನಡೆದಿಲ್ಲ ಎಂಬ ಅರ್ಥ ಕೊಡುವ ಕ್ರಿಯಾಪದಗಳು ನಿಷೇಧಾರ್ಥಕ ಕ್ರಿಯಾಪದಗಳು. ಉದಾ: ಮಾಡನು, ಬರೆಯಳು, ಹೋಗರು. ಸಂಭಾವನಾರ್ಥಕ – ಸಾಧ್ಯತೆ (ಮಾಡಿಯಾನು), ವಿಧ್ಯರ್ಥಕ – ಆಜ್ಞೆ/ಹಾರೈಕೆ (ಮಾಡಲಿ), ಕಾಲಾರ್ಥಕ – ಕಾಲ ಸೂಚನೆ.

  25. SDA Jan 2026 · P2 · Q10 · General Kannada · Grammar

    ‘ಈ ಹಲಸಿನ ಕಾಯಿಗೆ ಒಂದು ಚಿಕ್ಕ ಕಾಸನ್ನೂ ನಾನು ಹೆಚ್ಚಾಗಿ ಕೊಡುವುದಿಲ್ಲ.’ ಈ ವಾಕ್ಯದಲ್ಲಿರುವ ಗುಣವಾಚಕವನ್ನು ಗುರುತಿಸಿ.

    1. ಹಲಸಿನ ಕಾಯಿ
    2. ಒಂದು
    3. ಚಿಕ್ಕ
    4. ಕಾಸು
    Show answer

    Answer: (3) ಚಿಕ್ಕ

    A guṇavācaka (adjective of quality) describes the nature, size or colour of a noun. 'Cikka' (small) qualifies 'kāsu' (coin), so it is the guṇavācaka. 'Ondu' (one) is a numeral (saṅkhyāvācaka); 'halasina kāyi' and 'kāsu' are nouns.

    ನಾಮಪದದ ಗುಣ, ಸ್ವಭಾವ, ಗಾತ್ರ, ಬಣ್ಣಗಳನ್ನು ಸೂಚಿಸುವ ಪದ ಗುಣವಾಚಕ. ಇಲ್ಲಿ 'ಚಿಕ್ಕ' ಎಂಬುದು 'ಕಾಸು' ಪದದ ಗಾತ್ರವನ್ನು ಸೂಚಿಸುವುದರಿಂದ ಗುಣವಾಚಕ. 'ಒಂದು' ಸಂಖ್ಯಾವಾಚಕ; 'ಹಲಸಿನ ಕಾಯಿ', 'ಕಾಸು' ನಾಮಪದಗಳು.

  26. SDA Jan 2026 · P2 · Q11 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ : ಪಟ್ಟಿ I — ಪಟ್ಟಿ II a. ಸಾವಿರ ಆನೆ — i. ಪರಿಮಾಣ ವಾಚಕ b. ಕೆಂಪು ಬಟ್ಟೆ — ii. ಪ್ರಕಾರ ವಾಚಕ c. ಹಲವು ದಿನ — iii. ಸಂಖ್ಯಾ ವಾಚಕ d. ಎಂಥ ಬಣ್ಣ — iv. ಗುಣ ವಾಚಕ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    1. a-iii, b-iv, c-i, d-ii
    2. a-i, b-iv, c-iii, d-ii
    3. a-iii, b-ii, c-iv, d-i
    4. a-ii, b-i, c-iii, d-iv
    Show answer

    Answer: (1) a-iii, b-iv, c-i, d-ii

    Explanation: open it in the practice app. It needs the ₹149 All-in-One Pass: one payment for every exam on the site.

  27. SDA Jan 2026 · P2 · Q12 · General Kannada · Grammar

    ಈ ಕೆಳಗಿನವುಗಳಲ್ಲಿ ಭಾವನಾಮಗಳನ್ನು ಗುರುತಿಸಿ a. ಕೋಪ b. ಸಂತೋಷ c. ಸಮಾಧಾನ d. ಶಾಲೆ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    1. a ಮಾತ್ರ
    2. a, b ಮತ್ತು c
    3. a ಮತ್ತು b
    4. a, b, c ಮತ್ತು d
    Show answer

    Answer: (2) a, b ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  28. SDA Jan 2026 · P2 · Q13 · General Kannada · Grammar

    ನಾನು, ನಾವು - ಇವು ಯಾವ ಸರ್ವನಾಮಗಳಿಗೆ ಉದಾಹರಣೆಗಳಾಗಿವೆ ?

    1. ಆತ್ಮಾರ್ಥಕ ಸರ್ವನಾಮ
    2. ಮಧ್ಯಮ ಪುರುಷ ಸರ್ವನಾಮ
    3. ಉತ್ತಮ ಪುರುಷ ಸರ್ವನಾಮ
    4. ಪುರುಷಾರ್ಥಕ ಸರ್ವನಾಮ
    Show answer

    Answer: (3) ಉತ್ತಮ ಪುರುಷ ಸರ್ವನಾಮ

    Explanation: open it in the practice app. It needs the ₹149 All-in-One Pass: one payment for every exam on the site.

  29. SDA Jan 2026 · P2 · Q17 · General Kannada · Grammar

    ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು. - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣ ವಿಶೇಷತೆಯನ್ನು ಗುರುತಿಸಿ. (ಅಡಿಗೆರೆ ಎಳೆದ ಪದ: ಮನೆಮನೆಗಳನ್ನು)

    1. ಜೋಡು ನುಡಿ
    2. ಅನುಕರಣಾವ್ಯಯ
    3. ದ್ವಿರುಕ್ತಿ
    4. ನುಡಿಗಟ್ಟು
    Show answer

    Answer: (3) ದ್ವಿರುಕ್ತಿ

    Explanation: open it in the practice app. It needs the ₹149 All-in-One Pass: one payment for every exam on the site.

  30. SDA Jan 2026 · P2 · Q18 · General Kannada · Grammar

    ಸೂಕ್ತ ಲೇಖನ ಚಿಹ್ನೆ ಬಳಕೆಯಾಗಿರುವ ಆಯ್ಕೆಯನ್ನು ಗುರುತಿಸಿ.

    1. “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
    2. “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ, ನಮ್ಮ ಒಳಗಣ್ಣುಗಳು.”
    3. “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ. ನಮ್ಮ ಒಳಗಣ್ಣುಗಳು.”
    4. “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ.” (ನಮ್ಮ ಒಳಗಣ್ಣುಗಳು)
    Show answer

    Answer: (1) “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”

    Explanation: open it in the practice app. It needs the ₹149 All-in-One Pass: one payment for every exam on the site.

  31. SDA Jan 2026 · P2 · Q21 · General Kannada · Grammar

    ಹೇಳಿಕೆ 1 : ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತಾರೆ. ಹೇಳಿಕೆ 2 : ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ. ಈ ಮೇಲಿನ ಹೇಳಿಕೆಗಳನ್ನು ಆಧರಿಸಿ ಕೊಟ್ಟಿರುವ ಅಯ್ಕೆಗಳಲ್ಲಿ ಸರಿ ಉತ್ತರವನ್ನು ಗುರುತಿಸಿ.

    1. ಹೇಳಿಕೆ 1 ತಪ್ಪು, ಹೇಳಿಕೆ 2 ತಪ್ಪು
    2. ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ
    3. ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು
    4. ಹೇಳಿಕೆ 1 ಸರಿ, ಹೇಳಿಕೆ 2 ಸರಿ
    Show answer

    Answer: (4) ಹೇಳಿಕೆ 1 ಸರಿ, ಹೇಳಿಕೆ 2 ಸರಿ

    Explanation: open it in the practice app. It needs the ₹149 All-in-One Pass: one payment for every exam on the site.

  32. SDA Jan 2026 · P2 · Q22 · General Kannada · Grammar

    ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ಈ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು. ಮೇಲಿನ ವಾಕ್ಯವು ಯಾವುದಕ್ಕೆ ಉದಾಹರಣೆಯಾಗುತ್ತದೆ ?

    1. ಸಂಯುಕ್ತ ವಾಕ್ಯ
    2. ಸಂಯೋಜಿತ ವಾಕ್ಯ
    3. ಮಿಶ್ರ ವಾಕ್ಯ
    4. ಸಾಮಾನ್ಯ ವಾಕ್ಯ
    Show answer

    Answer: (3) ಮಿಶ್ರ ವಾಕ್ಯ

    Explanation: open it in the practice app. It needs the ₹149 All-in-One Pass: one payment for every exam on the site.

  33. SDA Jan 2026 · P2 · Q23 · General Kannada · Grammar

    “ನನ್ನ ಸತ್ಯಾನ್ವೇಷಣೆ ಕೃತಿಯನ್ನು ಗಾಂಧೀಜಿಯವರು ರಚಿಸಿದರು” ಮೇಲಿನ ವಾಕ್ಯದಲ್ಲಿರುವ ಕರ್ಮಪದವನ್ನು ಗುರುತಿಸಿ.

    1. ಗಾಂಧೀಜಿಯವರು
    2. ನನ್ನ ಸತ್ಯಾನ್ವೇಷಣೆ
    3. ಕೃತಿಯನ್ನು
    4. ರಚಿಸಿದರು
    Show answer

    Answer: (3) ಕೃತಿಯನ್ನು

    Explanation: open it in the practice app. It needs the ₹149 All-in-One Pass: one payment for every exam on the site.

  34. SDA Jan 2026 · P2 · Q27 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ I — ಪಟ್ಟಿ II a. ಚೆನ್ನಾಗಿ — i. ಹರಿಯುತ್ತದೆ b. ದೊಪ್ಪನೆ — ii. ಬರೆದನು c. ವೇಗವಾಗಿ — iii. ಬಿದ್ದಿತು d. ಕೆಂಪಗೆ — iv. ಓಡುವನು e. ಜುಳುಜುಳುನೆ — v. ಕಾಯಿಸು ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. a-ii, b-iii, c-iv, d-v, e-i
    2. a-ii, b-iii, c-v, d-iv, e-i
    3. a-iii, b-ii, c-iv, d-v, e-i
    4. a-i, b-ii, c-iii, d-iv, e-v
    Show answer

    Answer: (1) a-ii, b-iii, c-iv, d-v, e-i

    Explanation: open it in the practice app. It needs the ₹149 All-in-One Pass: one payment for every exam on the site.

  35. SDA Jan 2026 · P2 · Q28 · General Kannada · Grammar

    ಪೂರ್ಣ ವರ್ತಮಾನಕಾಲವನ್ನು ಸೂಚಿಸುವ ಕ್ರಿಯಾಪದ.

    1. ತಿಂದಿದ್ದಾನೆ
    2. ತಿಂದಿದ್ದನು
    3. ತಿಂದಿರುವನು
    4. ತಿನ್ನುತ್ತಿರಬಹುದು
    Show answer

    Answer: (1) ತಿಂದಿದ್ದಾನೆ

    Explanation: open it in the practice app. It needs the ₹149 All-in-One Pass: one payment for every exam on the site.

  36. SDA Jan 2026 · P2 · Q29 · General Kannada · Grammar

    ಕೆಳಗಿನ ಪದ ವಿಂಗಡಣೆಯಲ್ಲಿ ತಪ್ಪಾದ ಆಯ್ಕೆಯನ್ನು ಗುರುತಿಸಿ.

    1. ಅಣ್ಣ - ಅ + ಣ್ + ಣ್ + ಅ
    2. ಅಕ್ಷ - ಅ + ಕ್ + ಷ್ + ಅ
    3. ಚಿನ್ನ - ಚ್ + ಇ + ನ್ + ನ್ + ಆ
    4. ಹಬ್ಬ - ಹ್ + ಆ + ಬ್ + ಬ್ + ಅ
    Show answer

    Answer: (3) ಚಿನ್ನ - ಚ್ + ಇ + ನ್ + ನ್ + ಆ / (4) ಹಬ್ಬ - ಹ್ + ಆ + ಬ್ + ಬ್ + ಅ

    Explanation: open it in the practice app. It needs the ₹149 All-in-One Pass: one payment for every exam on the site.

  37. SDA Jan 2026 · P2 · Q31 · General Kannada · Grammar

    ಗ್ರಹವಾಚಕ ಶಬ್ದಗಳಾದ ‘ಸೂರ್ಯ, ಚಂದ್ರ, ಶನಿ, ಮಂಗಳ’ - ಇತ್ಯಾದಿಗಳನ್ನು ಯಾವ ಲಿಂಗಗಳೆಂದು ಗುರುತಿಸುವರು ?

    1. ಪುಲ್ಲಿಂಗ
    2. ಪುನ್ನಪುಂಸಕಲಿಂಗ
    3. ನಪುಂಸಕಲಿಂಗ
    4. ನಿತ್ಯನಪುಂಸಕಲಿಂಗ
    Show answer

    Answer: (2) ಪುನ್ನಪುಂಸಕಲಿಂಗ

    Explanation: open it in the practice app. It needs the ₹149 All-in-One Pass: one payment for every exam on the site.

  38. SDA Jan 2026 · P2 · Q34 · General Kannada · Grammar

    ‘ಹುಲಿಯಂಜಿಕೆ’ - ಈ ಪದದ ಸಮಾಸವನ್ನು ಗುರುತಿಸಿ.

    1. ಪಂಚಮೀ ತತ್ಪುರುಷ ಸಮಾಸ
    2. ಷಷ್ಠೀ ತತ್ಪುರುಷ ಸಮಾಸ
    3. ಸಪ್ತಮೀ ತತ್ಪುರುಷ ಸಮಾಸ
    4. ಚತುರ್ಥೀ ತತ್ಪುರುಷ ಸಮಾಸ
    Show answer

    Answer: (1) ಪಂಚಮೀ ತತ್ಪುರುಷ ಸಮಾಸ

    Explanation: open it in the practice app. It needs the ₹149 All-in-One Pass: one payment for every exam on the site.

  39. SDA Jan 2026 · P2 · Q35 · General Kannada · Grammar

    ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಿ/ಜೋಡಿಗಳನ್ನು ಗುರುತಿಸಿ. a. ಆಕಾಶಕ್ಕೆ - ಚತುರ್ಥೀ ವಿಭಕ್ತಿ b. ಬಯಲಲ್ಲಿ - ಪ್ರಥಮ ವಿಭಕ್ತಿ c. ಬೆಂಕಿಯಿಂದ - ಪಂಚಮೀ ವಿಭಕ್ತಿ d. ಮರವು - ದ್ವಿತೀಯಾ ವಿಭಕ್ತಿ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. a ಮಾತ್ರ
    2. a ಮತ್ತು c
    3. c ಮಾತ್ರ
    4. c ಮತ್ತು d
    Show answer

    Answer: (2) a ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  40. SDA Feb 2026 · P2 · Q1 · General Kannada · Grammar

    ಈ ಕೆಳಗೆ ನೀಡಲಾಗಿರುವ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರುವ ಆಯ್ಕೆಯನ್ನು ಗುರುತಿಸಿ. ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು

    1. ‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ. ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು’...
    2. ‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ’ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ. ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು...
    3. “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ, ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    4. “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    Show answer

    Answer: (4) “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...

    The line is someone's spoken words reproduced exactly, so it takes double quotation marks (“ ”). 'Ghosts live in tamarind trees' is a complete statement and ends with a full stop; the next two clauses ('a ghost lived in this one, so the landlord cut it') are linked as cause and effect, so a comma joins them. Single quotes (‘ ’) are for special or technical words, not speech.

    ಇದು ಒಬ್ಬರು ಆಡಿದ ಮಾತನ್ನು ಯಥಾವತ್ತಾಗಿ ಬರೆದ ವಾಕ್ಯ; ಆದ್ದರಿಂದ ಜೋಡಿ ಉದ್ಧರಣ ಚಿಹ್ನೆ (“ ”) ಬೇಕು. ‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ’ ಒಂದು ಪೂರ್ಣ ವಾಕ್ಯ, ಅದಕ್ಕೆ ಪೂರ್ಣವಿರಾಮ (.); ಮುಂದಿನ ಎರಡು ವಾಕ್ಯಾಂಶಗಳು ಕಾರಣ–ಪರಿಣಾಮದಿಂದ ಸೇರಿರುವುದರಿಂದ ಅವುಗಳ ನಡುವೆ ಅಲ್ಪವಿರಾಮ (,). ಏಕ ಉದ್ಧರಣ (‘ ’) ವಿಶೇಷ/ಪಾರಿಭಾಷಿಕ ಪದಗಳಿಗೆ ಮಾತ್ರ.

  41. SDA Feb 2026 · P2 · Q2 · General Kannada · Grammar

    ಹೊಂದಿಸಿ ಬರೆಯಿರಿ. ಪಟ್ಟಿ-I (ವಿವರಣೆ) — ಪಟ್ಟಿ-II (ಲೇಖನ ಚಿಹ್ನೆ) (a) ವಿಷಾದ, ದುಃಖ ಭಾವನೆಯ ಚಿಹ್ನೆ — (i) ‘ ’ (b) ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವ ಚಿಹ್ನೆ — (ii) ( ) (c) ಪಾರಿಭಾಷಿಕ ಪದಗಳನ್ನು ಬಳಸುವಾಗ ಬರೆಯುವ ಚಿಹ್ನೆ — (iii) ! (d) ಒಂದು ಪದವನ್ನೋ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕವಿದ್ದರೆ ಬಳಸುವ ಚಿಹ್ನೆ — (iv) “ ” ಸಂಕೇತಗಳು :

    1. a - iii, b - iv, c - ii, d - i
    2. a - iii, b - iv, c - i, d - ii
    3. a - iii, b - ii, c - iv, d - i
    4. a - i, b - ii, c - iii, d - iv
    Show answer

    Answer: (2) a - iii, b - iv, c - i, d - ii

    Exclamation mark (!) shows emotions such as regret, sorrow or surprise; double quotes (“ ”) reproduce someone's exact words; single quotes (‘ ’) mark technical (paaribhaashika) terms; brackets ( ) enclose a synonym or explanation of a word or sentence. So a-iii, b-iv, c-i, d-ii.

    ಭಾವಸೂಚಕ ಚಿಹ್ನೆ (!) ವಿಷಾದ, ದುಃಖ, ಆಶ್ಚರ್ಯ ಮೊದಲಾದ ಭಾವನೆಗಳನ್ನು ಸೂಚಿಸುತ್ತದೆ; ಜೋಡಿ ಉದ್ಧರಣ ಚಿಹ್ನೆ (“ ”) ಒಬ್ಬರ ಮಾತನ್ನು ಯಥಾವತ್ತಾಗಿ ಬರೆಯುವಾಗ; ಏಕ ಉದ್ಧರಣ ಚಿಹ್ನೆ (‘ ’) ಪಾರಿಭಾಷಿಕ ಪದಗಳಿಗೆ; ಆವರಣ ಚಿಹ್ನೆ ( ) ಪದ/ವಾಕ್ಯಕ್ಕೆ ಸಮಾನಾರ್ಥಕ ಅಥವಾ ವಿವರಣೆ ನೀಡುವಾಗ. ಆದ್ದರಿಂದ a-iii, b-iv, c-i, d-ii.

  42. SDA Feb 2026 · P2 · Q3 · General Kannada · Grammar

    ಸಂಧಿ ಪದ ಮತ್ತು ಸಂಧಿಗಳ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ.

    1. ಏಕೈಕ - ಗುಣಸಂಧಿ
    2. ಗಿರೀಶ - ಯಣ್ ಸಂಧಿ
    3. ಷಣ್ಮುಖ - ಅನುನಾಸಿಕ ಸಂಧಿ
    4. ಮನ್ವಾದಿ - ಆಗಮ ಸಂಧಿ
    Show answer

    Answer: (3) ಷಣ್ಮುಖ - ಅನುನಾಸಿಕ ಸಂಧಿ

    Shanmukha = shat + mukha: before the nasal 'm', the consonant 't' (ṭ) is replaced by the nasal of its own class, 'ṇ' – anunaasika sandhi. The others are wrong: ekaika (eka + eka) is vriddhi sandhi, girisha (giri + isha) is savarna-deergha sandhi, and manvaadi (manu + aadi) is yan sandhi.

    ಷಣ್ಮುಖ = ಷಟ್ + ಮುಖ; ಅನುನಾಸಿಕಾಕ್ಷರ ‘ಮ’ ಪರವಾದಾಗ ‘ಟ್’ ಗೆ ಅದೇ ವರ್ಗದ ಅನುನಾಸಿಕ ‘ಣ್’ ಆದೇಶವಾಗುತ್ತದೆ – ಅನುನಾಸಿಕ ಸಂಧಿ. ಉಳಿದವು ತಪ್ಪು: ಏಕೈಕ (ಏಕ + ಏಕ) – ವೃದ್ಧಿ ಸಂಧಿ; ಗಿರೀಶ (ಗಿರಿ + ಈಶ) – ಸವರ್ಣದೀರ್ಘ ಸಂಧಿ; ಮನ್ವಾದಿ (ಮನು + ಆದಿ) – ಯಣ್ ಸಂಧಿ.

  43. SDA Feb 2026 · P2 · Q4 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಲೋಪ ಸಂಧಿ — (i) ಸುರಾಸುರ (b) ಆಗಮ ಸಂಧಿ — (ii) ಕಾಡಿಗೆ (c) ಆದೇಶ ಸಂಧಿ — (iii) ಗುರುವೊಬ್ಬನು (d) ಸವರ್ಣ ದೀರ್ಘ ಸಂಧಿ — (iv) ಅಡಿಗಲ್ಲು ಸಂಕೇತಗಳು :

    1. a - ii, b - iii, c - iv, d - i
    2. a - ii, b - iii, c - i, d - iv
    3. a - ii, b - iv, c - iii, d - i
    4. a - i, b - iv, c - iii, d - ii
    Show answer

    Answer: (1) a - ii, b - iii, c - iv, d - i

    Kaadige = kaadu + ige ('u' dropped – lopa sandhi); guruvobbanu = guru + obbanu ('v' inserted – aagama sandhi); adigallu = adi + kallu ('k' replaced by 'g' – aadesha sandhi); suraasura = sura + asura (two like vowels merge into a long vowel – savarna-deergha sandhi).

    ಕಾಡಿಗೆ = ಕಾಡು + ಇಗೆ (‘ಉ’ಕಾರ ಲೋಪ – ಲೋಪ ಸಂಧಿ); ಗುರುವೊಬ್ಬನು = ಗುರು + ಒಬ್ಬನು (‘ವ್’ಕಾರ ಆಗಮ – ಆಗಮ ಸಂಧಿ); ಅಡಿಗಲ್ಲು = ಅಡಿ + ಕಲ್ಲು (‘ಕ’ಕಾರಕ್ಕೆ ‘ಗ’ಕಾರ ಆದೇಶ – ಆದೇಶ ಸಂಧಿ); ಸುರಾಸುರ = ಸುರ + ಅಸುರ (ಸವರ್ಣದೀರ್ಘ ಸಂಧಿ). ಆದ್ದರಿಂದ a-ii, b-iii, c-iv, d-i.

  44. SDA Feb 2026 · P2 · Q5 · General Kannada · Grammar

    ಒಂದು ಮತ್ತೊಂದರಂತೆ ಇದೆ ಎಂದು ಹೋಲಿಸಿ ವರ್ಣಿಸುವುದನ್ನು ಉಪಮಾಲಂಕಾರ ಎನ್ನುತ್ತೇವೆ. ಇಲ್ಲಿ ಹೋಲಿಕೆಗಳನ್ನು ಏನೆಂದು ಕರೆಯುವರು?

    1. ಉಪಮಾನ
    2. ಉಪಮೇಯ
    3. ಉಪಮಾವಾಚಕ
    4. ಸಮಾನ ಧರ್ಮ
    Show answer

    Answer: (1) ಉಪಮಾನ

    In upamaalankaara (simile) the thing used as the standard of comparison is the upamaana. In 'mukha kamaladante sundaravaagide' (the face is beautiful like a lotus): face = upameya (thing described), lotus = upamaana, 'ante' (like) = upamaa-vaachaka, beauty = samaana dharma (common quality).

    ಉಪಮಾಲಂಕಾರದಲ್ಲಿ ಯಾವುದಕ್ಕೆ ಹೋಲಿಸಲಾಗುತ್ತದೆಯೋ ಆ ಹೋಲಿಕೆಯ ವಸ್ತುವೇ ಉಪಮಾನ. ಉದಾ: ‘ಮುಖವು ಕಮಲದಂತೆ ಸುಂದರವಾಗಿದೆ’ – ಮುಖ ಉಪಮೇಯ (ವರ್ಣಿಸುವ ವಸ್ತು), ಕಮಲ ಉಪಮಾನ, ‘ಅಂತೆ’ ಉಪಮಾವಾಚಕ, ಸೌಂದರ್ಯ ಸಮಾನ ಧರ್ಮ.

  45. SDA Feb 2026 · P2 · Q14 · General Kannada · Grammar

    ‘ಬದ್ದವಣಂ ಬಾಜಿಸಿದುವು ವೀಧಿವೀಧಿಯೋಲ್’ - ಈ ವಾಕ್ಯದಲ್ಲಿರುವ ದ್ವಿರುಕ್ತಿಯನ್ನು ಗುರುತಿಸಿ.

    1. ಬದ್ದವಣಂ
    2. ಬಾಜಿಸು
    3. ವೀಧಿವೀಧಿ
    4. ವೀಧಿಯೋಲ್
    Show answer

    Answer: (3) ವೀಧಿವೀಧಿ

    Explanation: open it in the practice app. It needs the ₹149 All-in-One Pass: one payment for every exam on the site.

  46. SDA Feb 2026 · P2 · Q15 · General Kannada · Grammar

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ನಾಮವಾಚಕ — (i) ಒಳ್ಳೆಯವರು (b) ಗುಣವಾಚಕ — (ii) ಕೋಟಿ (c) ಸಂಖ್ಯಾವಾಚಕ — (iii) ಸೀತೆ (d) ಸರ್ವನಾಮ — (iv) ಅವನು ಸಂಕೇತಗಳು :

    1. a - iii, b - i, c - ii, d - iv
    2. a - iv, b - ii, c - i, d - iii
    3. a - iii, b - ii, c - iv, d - i
    4. a - iii, b - i, c - iv, d - ii
    Show answer

    Answer: (1) a - iii, b - i, c - ii, d - iv

    Explanation: open it in the practice app. It needs the ₹149 All-in-One Pass: one payment for every exam on the site.

  47. SDA Feb 2026 · P2 · Q16 · General Kannada · Grammar

    ‘ನಮ್ಮ ಮನೆಯಲ್ಲಿ ದೊಡ್ಡನಾಯಿ ಇದೆ’. ಈ ವಾಕ್ಯದಲ್ಲಿರುವ ಗುಣವಾಚಕವನ್ನು ಗುರುತಿಸಿ.

    1. ಮನೆ
    2. ನಮ್ಮ
    3. ದೊಡ್ಡ
    4. ನಾಯಿ
    Show answer

    Answer: (3) ದೊಡ್ಡ

    Explanation: open it in the practice app. It needs the ₹149 All-in-One Pass: one payment for every exam on the site.

  48. SDA Feb 2026 · P2 · Q19 · General Kannada · Grammar

    ಕೆಳಗಿನ ಯಾವ ಸಂಧಿ ಪದವನ್ನು ತಪ್ಪಾದ ಕ್ರಮದಲ್ಲಿ ಬಿಡಿಸಿ ಬರೆಯಲಾಗಿದೆ?

    1. ಷಡಾನನ = ಷಟ್ + ಆನನ
    2. ಪಿತ್ರಾರ್ಜಿತ = ಪಿತೃ + ಅರ್ಜಿತ
    3. ಮನ್ವಂತರ = ಮನ + ಅಂತರ
    4. ವನೌಷಧ = ವನ + ಔಷಧ
    Show answer

    Answer: (3) ಮನ್ವಂತರ = ಮನ + ಅಂತರ / (4) ವನೌಷಧ = ವನ + ಔಷಧ

    Explanation: open it in the practice app. It needs the ₹149 All-in-One Pass: one payment for every exam on the site.

  49. SDA Feb 2026 · P2 · Q20 · General Kannada · Grammar

    ‘ಶುಂಠಿ’ ತತ್ಸಮ ಪದದ ತದ್ಭವ ರೂಪ

    1. ಸುಂಟಿಕ
    2. ಸುಂಟ
    3. ಸೊಂಟಿ
    4. ಶುಂಟಾ
    Show answer

    Answer: (3) ಸೊಂಟಿ

    Explanation: open it in the practice app. It needs the ₹149 All-in-One Pass: one payment for every exam on the site.

  50. SDA Feb 2026 · P2 · Q21 · General Kannada · Grammar

    ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವ ತತ್ಸಮ-ತದ್ಭವಗಳ ಜೋಡಿಗಳನ್ನು ಗುರುತಿಸಿರಿ. (a) ಸ್ನುಷಾ - ಸೊಸೆ (b) ಮಯೂರ - ಮೂರ (c) ಶಿಲ್ಪಿಕ - ಚಿಪ್ಪಿಗ (d) ಭ್ರಮಣ - ತಿರುಗು

    1. (a) ಮತ್ತು (b)
    2. (b) ಮತ್ತು (c)
    3. (a) ಮತ್ತು (c)
    4. (c) ಮತ್ತು (d)
    Show answer

    Answer: (3) (a) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  51. SDA Feb 2026 · P2 · Q27 · General Kannada · Grammar

    ‘ಕಣ್ಗಾಣದೆ ಇದ್ದನು’ – ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸಮಾಸವನ್ನು ತಿಳಿಸಿ. (ಅಡಿಗೆರೆ ಎಳೆದ ಪದ: ಕಣ್ಗಾಣದೆ)

    1. ಅಂಶಿ ಸಮಾಸ
    2. ಕ್ರಿಯಾ ಸಮಾಸ
    3. ದ್ವಂದ್ವ ಸಮಾಸ
    4. ಕರ್ಮಧಾರಯ ಸಮಾಸ
    Show answer

    Answer: (2) ಕ್ರಿಯಾ ಸಮಾಸ

    Explanation: open it in the practice app. It needs the ₹149 All-in-One Pass: one payment for every exam on the site.

  52. SDA Feb 2026 · P2 · Q28 · General Kannada · Grammar

    ಈ ಕೆಳಗಿನವುಗಳಲ್ಲಿ ಸರಿಯಾದ ಸಮಾಸದ ಜೋಡಿಯನ್ನು ಗುರುತಿಸಿ.

    1. ಇತ್ತಂಡ - ದ್ವಿಗು ಸಮಾಸ
    2. ಎಳವಳ್ಳಿ - ದ್ವಂದ್ವ ಸಮಾಸ
    3. ಹಿಂದಲೆ - ಕ್ರಿಯಾ ಸಮಾಸ
    4. ನಡುಬೆನ್ನು - ಬಹುವ್ರೀಹಿ ಸಮಾಸ
    Show answer

    Answer: (1) ಇತ್ತಂಡ - ದ್ವಿಗು ಸಮಾಸ

    Explanation: open it in the practice app. It needs the ₹149 All-in-One Pass: one payment for every exam on the site.

  53. SDA Feb 2026 · P2 · Q29 · General Kannada · Grammar

    ಈ ಕೆಳಗಿನ ಜೋಡಿಗಳಲ್ಲಿ ಯಾವುದು/ಯಾವುವು ಸರಿ ಹೊಂದಾಣಿಕೆ ಆಗುತ್ತದೆ/ವೆ? (a) ಗಾವುದಗಳನ್ನು - ಪ್ರಥಮ (b) ಮಕ್ಕಳಿಂದ - ಪಂಚಮಿ (c) ಅಸಹನೆಗೆ - ಷಷ್ಠಿ (d) ಪುಸ್ತಕದಲ್ಲಿ - ಸಪ್ತಮಿ

    1. (a) ಮಾತ್ರ
    2. (b) ಮತ್ತು (d)
    3. (c) ಮಾತ್ರ
    4. (d) ಮಾತ್ರ
    Show answer

    Answer: (4) (d) ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  54. SDA Feb 2026 · P2 · Q30 · General Kannada · Grammar

    ‘ಮಗುವೇ ಇತ್ತ ಬಾ’ – ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು? (ಅಡಿಗೆರೆ ಎಳೆದ ಪದ: ಮಗುವೇ)

    1. ಆ
    2. ಇ
    3. ಏ
    4. ಉ
    Show answer

    Answer: (3) ಏ

    Explanation: open it in the practice app. It needs the ₹149 All-in-One Pass: one payment for every exam on the site.

  55. SDA Feb 2026 · P2 · Q31 · General Kannada · Grammar

    ‘ಅಲರ್ಗಣ್ಣೆ’ ಎಂಬುದು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಉದಾಹರಣೆಯಾಗಿದೆ?

    1. ಸ್ತ್ರೀ ಲಿಂಗ
    2. ಪುಲ್ಲಿಂಗ
    3. ನಪುಂಸಕಲಿಂಗ
    4. ವಾಚ್ಯಲಿಂಗ
    Show answer

    Answer: (1) ಸ್ತ್ರೀ ಲಿಂಗ

    Explanation: open it in the practice app. It needs the ₹149 All-in-One Pass: one payment for every exam on the site.

  56. SDA Feb 2026 · P2 · Q35 · General Kannada · Grammar

    ಈ ಕೆಳಗೆ ಕೊಟ್ಟಿರುವ ಏರುಪೇರಾದ ವಾಕ್ಯವನ್ನು ಸರಿಹೊಂದಿಸುವ ಉತ್ತರದ ಗುಂಪನ್ನು ಗುರುತಿಸಿ. ತಾಯಿಯ (a) | ಮೇಲೆದ್ದ (b) | ಕೊನೆಗೆ (c) | ಹಿಡಿದುಬಿಟ್ಟಳು (d) | ತಲೆಗೂದಲನ್ನು (e)

    1. (a), (b), (c), (d), (e)
    2. (e), (d), (c), (b), (a)
    3. (c), (b), (a), (e), (d)
    4. (d), (b), (a), (e), (c)
    Show answer

    Answer: (3) (c), (b), (a), (e), (d)

    Explanation: open it in the practice app. It needs the ₹149 All-in-One Pass: one payment for every exam on the site.

Vocabulary & Usage

  1. FDA Jan 2026 · P2 · Q4 · General Kannada · Vocabulary & Usage

    ಏರುಪೇರಾದ ಗಾದೆಯನ್ನು ಸಂಕೇತಗಳಿಂದ ಸರಿಮಾಡಿ ಗುರುತಿಸಿ. ಪಂಥ (a) | ದಂತ (b) | ಹೋದರೂ (c) | ಬಿಡ (d)

    1. (a), (c), (b), (d)
    2. (a), (b), (c), (d)
    3. (b), (c), (a), (d)
    4. (b), (a), (c), (d)
    Show answer

    Answer: (3) (b), (c), (a), (d)

    Correct order (b), (c), (a), (d): 'ದಂತ ಹೋದರೂ ಪಂಥ ಬಿಡ' (danta hōdarū pantha biḍa) – 'even if his teeth fall out he won't give up his obstinacy', said of a stubborn person.

    ಸರಿಯಾದ ಗಾದೆ: 'ದಂತ ಹೋದರೂ ಪಂಥ ಬಿಡ' – (b), (c), (a), (d). ಹಲ್ಲು ಉದುರಿ ಮುದುಕನಾದರೂ ತನ್ನ ಹಠ/ಪಂಥವನ್ನು ಬಿಡುವುದಿಲ್ಲ ಎಂಬ ಅರ್ಥ; ಹಠಮಾರಿಯ ಕುರಿತು ಹೇಳುವ ಗಾದೆ.

  2. FDA Jan 2026 · P2 · Q5 · General Kannada · Vocabulary & Usage

    ಈ ಕೆಳಗೆ ಕೊಟ್ಟಿರುವ ವಾಕ್ಯ ಏರುಪೇರಾಗಿದೆ; ಸರಿಯಾದ ಕ್ರಮದಲ್ಲಿರುವ ಆಯ್ಕೆಯನ್ನು ಗುರುತಿಸಿ. ಕನ್ನಡವೇ (a) | ರಾಜ-ರಾಣಿ (b) | ಕನ್ನಡ (c) | ಎಲ್ಲವೂ (d) | ನಾಡಿನಲ್ಲಿ (e)

    1. (c), (e), (a), (b), (d)
    2. (b), (d), (c), (e), (a)
    3. (c), (e), (d), (b), (a)
    4. (a), (b), (c), (e), (d)
    Show answer

    Answer: (1) (c), (e), (a), (b), (d)

    (c), (e), (a), (b), (d) gives 'ಕನ್ನಡ ನಾಡಿನಲ್ಲಿ ಕನ್ನಡವೇ ರಾಜ-ರಾಣಿ ಎಲ್ಲವೂ' – 'In the Kannada land, Kannada is king, queen and everything': place phrase first, then the subject, then the predicate.

    ಸರಿಯಾದ ವಾಕ್ಯ: 'ಕನ್ನಡ ನಾಡಿನಲ್ಲಿ ಕನ್ನಡವೇ ರಾಜ-ರಾಣಿ ಎಲ್ಲವೂ' – (c), (e), (a), (b), (d). ಮೊದಲು ಸ್ಥಳಸೂಚಕ ಪದ (ಕನ್ನಡ ನಾಡಿನಲ್ಲಿ), ನಂತರ ಕರ್ತೃ (ಕನ್ನಡವೇ), ಕೊನೆಯಲ್ಲಿ ವಿಧೇಯ (ರಾಜ-ರಾಣಿ ಎಲ್ಲವೂ) ಬರುತ್ತದೆ.

  3. FDA Jan 2026 · P2 · Q6 · General Kannada · Vocabulary & Usage

    ಇಂಗ್ಲಿಷ್ ಅಂಕಿಯಾದ 1969 ಮತ್ತು 1696ರ ಕನ್ನಡ ಅಂಕಿಗಳ ಸರಿಯಾದ ರೂಪವನ್ನು ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಗುರುತಿಸಿ.

    1. ೧೬೯೬ ಮತ್ತು ೧೯೬೯
    2. ೧೯೬೯ ಮತ್ತು ೧೬೯೬
    3. ೧೯೯೬ ಮತ್ತು ೧೬೬೯
    4. ೧೬೯೯ ಮತ್ತು ೧೬೯೬
    Show answer

    Answer: (2) ೧೯೬೯ ಮತ್ತು ೧೬೯೬

    Kannada numerals: 1 = ೧, 6 = ೬, 9 = ೯. So 1969 = ೧೯೬೯ and 1696 = ೧೬೯೬, in that order – option 2. Option 1 has the right numbers in the wrong order.

    ಕನ್ನಡ ಅಂಕಿಗಳು: 1 = ೧, 6 = ೬, 9 = ೯. ಆದ್ದರಿಂದ 1969 = ೧೯೬೯ ಮತ್ತು 1696 = ೧೬೯೬ (ಆಯ್ಕೆ 2). ಆಯ್ಕೆ 1 ರಲ್ಲಿ ಸಂಖ್ಯೆಗಳು ಸರಿ ಇದ್ದರೂ ಕ್ರಮ ಅದಲುಬದಲಾಗಿದೆ.

  4. FDA Jan 2026 · P2 · Q9 · General Kannada · Vocabulary & Usage

    ಔಪಚಾರಿಕ ಮತ್ತು ಅನೌಪಚಾರಿಕ ಪತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ. ಹೇಳಿಕೆ-I : ಔಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯಬೇಕು. ಹೇಳಿಕೆ-II : ಅನೌಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯುವ ಅವಶ್ಯಕತೆ ಇಲ್ಲ.

    1. ಹೇಳಿಕೆ-I ತಪ್ಪು ಮತ್ತು ಹೇಳಿಕೆ-II ಸರಿ
    2. ಹೇಳಿಕೆ-I ಮತ್ತು ಹೇಳಿಕೆ-II ಎರಡೂ ತಪ್ಪು
    3. ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ
    4. ಹೇಳಿಕೆ-I ಸರಿ ಮತ್ತು ಹೇಳಿಕೆ-II ತಪ್ಪು
    Show answer

    Answer: (3) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ

    A formal (official/business) letter must carry a 'subject' (vishaya) line stating its purpose; a personal, informal letter to family or friends needs none. Both statements are correct.

    ಔಪಚಾರಿಕ (ಕಚೇರಿ/ವ್ಯವಹಾರ) ಪತ್ರಗಳಲ್ಲಿ ಪತ್ರದ ಉದ್ದೇಶ ತಿಳಿಸುವ 'ವಿಷಯ' ಬರೆಯಬೇಕು; ಬಂಧು-ಮಿತ್ರರಿಗೆ ಬರೆಯುವ ಅನೌಪಚಾರಿಕ (ಖಾಸಗಿ) ಪತ್ರಗಳಲ್ಲಿ ವಿಷಯ ಬರೆಯುವ ಅಗತ್ಯವಿಲ್ಲ. ಆದ್ದರಿಂದ ಎರಡೂ ಹೇಳಿಕೆಗಳು ಸರಿ.

  5. FDA Jan 2026 · P2 · Q11 · General Kannada · Vocabulary & Usage

    ಈ ಕೆಳಗಿನ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ. ಅವನ ಮಾತಿನ ಹ್ಯುತ್ಪತ್ತಿ ಸೊಗಸಾಗಿದೆ. (ಅಡಿಗೆರೆ ಎಳೆದ ಪದ: ಹ್ಯುತ್ಪತ್ತಿ)

    1. ಹ್ಯೂತ್ಪತ್ತಿ
    2. ವ್ಯೂತ್ಪತ್ತಿ
    3. ವ್ಯುತ್ಪತ್ತಿ
    4. ನಿಷ್ಪತ್ತಿ
    Show answer

    Answer: (3) ವ್ಯುತ್ಪತ್ತಿ

    The correct spelling is 'vyutpatti' (ವ್ಯುತ್ಪತ್ತಿ – learning, scholarly skill; also etymology), with ವ + ಯ-ottu and a short ು, then ತ್ಪ and ತ್ತಿ. ಹ್ಯುತ್ಪತ್ತಿ/ಹ್ಯೂತ್ಪತ್ತಿ have the wrong first letter, ವ್ಯೂತ್ಪತ್ತಿ wrongly lengthens the vowel, and ನಿಷ್ಪತ್ತಿ is a different word.

    ಸರಿಯಾದ ರೂಪ 'ವ್ಯುತ್ಪತ್ತಿ' (ಪಾಂಡಿತ್ಯ, ಶಾಸ್ತ್ರಜ್ಞಾನ; ಪದದ ಮೂಲ ಎಂಬ ಅರ್ಥವೂ ಇದೆ). ಇದರಲ್ಲಿ 'ವ್ಯು' ಹ್ರಸ್ವ. 'ಹ್ಯುತ್ಪತ್ತಿ', 'ಹ್ಯೂತ್ಪತ್ತಿ' ತಪ್ಪು ರೂಪಗಳು; 'ವ್ಯೂತ್ಪತ್ತಿ'ಯಲ್ಲಿ ದೀರ್ಘ ತಪ್ಪು; 'ನಿಷ್ಪತ್ತಿ' ಬೇರೆಯೇ ಪದ.

  6. FDA Jan 2026 · P2 · Q12 · General Kannada · Vocabulary & Usage

    ‘ತಡಸಲು’ ಪದದ ಅರ್ಥವನ್ನು ಗುರುತಿಸಿ.

    1. ಘಟ್ಟ
    2. ಪ್ರಪಾತ
    3. ಜಲಪಾತ
    4. ಕಣಿವೆ
    Show answer

    Answer: (3) ಜಲಪಾತ

    Explanation: open it in the practice app. It needs the ₹149 All-in-One Pass: one payment for every exam on the site.

  7. FDA Jan 2026 · P2 · Q21 · General Kannada · Vocabulary & Usage

    ನಾಮ ಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆಯಾಗುವ ಧಾತುಗಳನ್ನು ಗುರುತಿಸಿ.

    1. ಆಡು, ಕಾಡು
    2. ಹರಿ, ಗರಿ
    3. ಆಳು, ಹಾಳು
    4. ಮಳೆ, ಬೆಳೆ
    Show answer

    Answer: (1) ಆಡು, ಕಾಡು

    Explanation: open it in the practice app. It needs the ₹149 All-in-One Pass: one payment for every exam on the site.

  8. FDA Jan 2026 · P2 · Q22 · General Kannada · Vocabulary & Usage

    “ಒಂದ್ಸಲ ಒಂದು ಗ್ರಾಮದ ಜನ್ರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿ ಕಟ್ತಾ ಇದ್ರು.” ಕೊಟ್ಟಿರುವ ಮೇಲಿನ ವಾಕ್ಯದಲ್ಲಿ ಎಷ್ಟು ಗ್ರಾಮ್ಯ ರೂಪಗಳಿವೆ?

    1. ಒಂದು
    2. ಮೂರು
    3. ಐದು
    4. ನಾಲ್ಕು
    Show answer

    Answer: (4) ನಾಲ್ಕು

    Explanation: open it in the practice app. It needs the ₹149 All-in-One Pass: one payment for every exam on the site.

  9. FDA Jan 2026 · P2 · Q23 · General Kannada · Vocabulary & Usage

    ಕೆಳಗೆ ನೀಡಿರುವ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರುವ ಆಯ್ಕೆಯನ್ನು ಗುರುತಿಸಿ. ಅಯ್ಯೋ ನನಗೆ ತಾಳಲಾರದ ಹಸಿವು ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ ಎಂದು ಕೂಗಿದನು.

    1. “ಅಯ್ಯೋ! ನನಗೆ ತಾಳಲಾರದ ಹಸಿವು. ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ?” ಎಂದು ಕೂಗಿದನು.
    2. ಅಯ್ಯೋ! ನನಗೆ ತಾಳಲಾರದ ಹಸಿವು ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು, ಯಾರೂ ಇಲ್ಲವೆ? ಎಂದು ಕೂಗಿದನು.
    3. “ಅಯ್ಯೋ ನನಗೆ ತಾಳಲಾರದ ಹಸಿವು, ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ. ಎಂದು ಕೂಗಿದನು.”
    4. “ಅಯ್ಯೋ ನನಗೆ ತಾಳಲಾರದ ಹಸಿವು” ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ? ಎಂದು ಕೂಗಿದನು
    Show answer

    Answer: (1) “ಅಯ್ಯೋ! ನನಗೆ ತಾಳಲಾರದ ಹಸಿವು. ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ?” ಎಂದು ಕೂಗಿದನು.

    Explanation: open it in the practice app. It needs the ₹149 All-in-One Pass: one payment for every exam on the site.

  10. FDA Jan 2026 · P2 · Q29 · General Kannada · Vocabulary & Usage

    ಕೆಳಗಿನ ವಿರುದ್ಧ ಪದಗಳಲ್ಲಿ ಸರಿಯಾದ ಜೋಡಿ/ಜೋಡಿಗಳನ್ನು ಗುರುತಿಸಿ. (a) ಪಾವನ × ಪಾತಕ (b) ಸ್ವಾರ್ಥ × ಪರಾರ್ಥ (c) ಆವರ್ತ × ನಿರವರ್ತ (d) ಲಂಘನ × ಆಲಂಘನ

    1. (a) ಮತ್ತು (b)
    2. (a) ಮತ್ತು (c)
    3. (b) ಮತ್ತು (c)
    4. (b) ಮತ್ತು (d)
    Show answer

    Answer: (1) (a) ಮತ್ತು (b)

    Explanation: open it in the practice app. It needs the ₹149 All-in-One Pass: one payment for every exam on the site.

  11. FDA Jan 2026 · P2 · Q30 · General Kannada · Vocabulary & Usage

    ಕೆಳಗಿನ ತತ್ಸಮ - ತದ್ಭವಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಅಂಗಾರ — (i) ಬಳ್ಳಿ (b) ಕುಡ್ಯ — (ii) ವೀಳ್ಯ (c) ವಲ್ಲಿ — (iii) ಗೋಡೆ (d) ವೀಟೆ — (iv) ಇಂಗಳ ಸಂಕೇತಗಳು :

    1. a-iv, b-i, c-iii, d-ii
    2. a-ii, b-iii, c-iv, d-i
    3. a-iv, b-iii, c-i, d-ii
    4. a-ii, b-iv, c-i, d-iii
    Show answer

    Answer: (3) a-iv, b-iii, c-i, d-ii

    Explanation: open it in the practice app. It needs the ₹149 All-in-One Pass: one payment for every exam on the site.

  12. FDA Jan 2026 · P2 · Q32 · General Kannada · Vocabulary & Usage

    ಈ ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದಗಳಲ್ಲಿ ತಪ್ಪಾಗಿರುವ ಪದಗಳನ್ನು ಗುರುತಿಸಿ. ವಿದ್ಯಾರ್ಥಿಗಳು ಉಪಾಧ್ಯಾಯರ ಮುಂದೆ ವಿಘ್ನಪನೆ ಮೂಲಕ ಭಿನ್ನವತ್ತಳೆಯನ್ನು ಸಲ್ಲಿಸಿದರು. (ಅಡಿಗೆರೆ ಎಳೆದ ಪದ: (a) ವಿದ್ಯಾರ್ಥಿಗಳು / (b) ಉಪಾಧ್ಯಾಯರ / (c) ವಿಘ್ನಪನೆ / (d) ಭಿನ್ನವತ್ತಳೆ)

    1. (a) ಮಾತ್ರ
    2. (c) ಮಾತ್ರ
    3. (a) ಮತ್ತು (d)
    4. (c) ಮತ್ತು (d)
    Show answer

    Answer: (4) (c) ಮತ್ತು (d)

    Explanation: open it in the practice app. It needs the ₹149 All-in-One Pass: one payment for every exam on the site.

  13. FDA Jan 2026 · P2 · Q34 · General Kannada · Vocabulary & Usage

    ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಕೆಯಾಗುವ ಗುಂಪುಗಳನ್ನು ಗುರುತಿಸಿ. (a) ಕಲ್ಯಾಣ, ಮದುವೆ, ಮಂಗಳ, ಕ್ಷೇಮ (b) ಕಾಡು, ಪೀಡಿಸು, ಅರಣ್ಯ, ಜಲ (c) ಗತಿ, ಚಲನೆ, ಸ್ಥಿತಿ, ಮೋಕ್ಷ (d) ನರ, ಅರ್ಜುನ, ರಕ್ತನಾಳ, ರಾಕ್ಷಸ

    1. (a) ಮತ್ತು (b)
    2. (b) ಮತ್ತು (c)
    3. (a) ಮತ್ತು (c)
    4. (a) ಮತ್ತು (d)
    Show answer

    Answer: (3) (a) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  14. SDA Jan 2026 · P2 · Q1 · General Kannada · Vocabulary & Usage

    ಈ ಕೆಳಗಿನ ಪದಗಳ ಜೋಡಿಗಳಲ್ಲಿ ತಪ್ಪಾದ ಪದ ಜೋಡಿಯನ್ನು ಗುರುತಿಸಿ : ಪಾಲು - ಹಾಲು, ಪಲಸು - ಹಲಸು, ಪಟಲ - ಹಟಲ, ಪಂದಿ - ಹಂದಿ, ಪಲ್ಲಿ - ಹಲ್ಲಿ

    1. ಪಲಸು - ಹಲಸು
    2. ಪಂದಿ - ಹಂದಿ
    3. ಪಾಲು - ಹಾಲು
    4. ಪಟಲ - ಹಟಲ
    Show answer

    Answer: (4) ಪಟಲ - ಹಟಲ

    Old Kannada words beginning with 'pa' changed to 'ha' in modern Kannada: paalu → haalu (milk), palasu → halasu (jackfruit), pandi → handi (pig), palli → halli (lizard). 'Paṭala' (layer, membrane, veil) is a Sanskrit tatsama word that does not undergo this change; 'haṭala' is not a word. So 'paṭala - haṭala' is the wrong pair.

    ಹಳಗನ್ನಡದ ಪದಾದಿಯ ಪಕಾರವು ಹೊಸಗನ್ನಡದಲ್ಲಿ ಹಕಾರವಾಗುತ್ತದೆ: ಪಾಲು → ಹಾಲು, ಪಲಸು → ಹಲಸು, ಪಂದಿ → ಹಂದಿ, ಪಲ್ಲಿ → ಹಲ್ಲಿ. ಆದರೆ 'ಪಟಲ' (ಪದರ, ಪೊರೆ, ತೆರೆ) ಸಂಸ್ಕೃತದ ತತ್ಸಮ ಪದ; ಇದಕ್ಕೆ ಈ ಬದಲಾವಣೆ ಅನ್ವಯಿಸದು, 'ಹಟಲ' ಎಂಬ ಪದವೇ ಇಲ್ಲ. ಆದ್ದರಿಂದ 'ಪಟಲ - ಹಟಲ' ತಪ್ಪಾದ ಜೋಡಿ.

  15. SDA Jan 2026 · P2 · Q3 · General Kannada · Vocabulary & Usage

    ಈ ಕೆಳಗೆ ಅಡಿಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರುತಿಸಿ : ಬಾಬುಕೋಡಿ ವೆಂಕಟರಮಣ ಕಾರಂತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಳ ತಾಲ್ಲೂಕಿನ ಮಂಚೆ ಗ್ರಾಮದಲ್ಲಿ ಜನಿಸಿದರು. (ಅಡಿಗೆರೆ ಎಳೆದ ಪದ: ಬಂಟ್ವಳ)

    1. ಬಂಟ್ಠಾಳ
    2. ಬಂಟ್ವಾಳ
    3. ಬಂಟವಳ
    4. ಬಂಟಅವಳ
    Show answer

    Answer: (2) ಬಂಟ್ವಾಳ

    Theatre director B. V. (Babukodi Venkataramana) Karanth was born in Bantwal taluk, Dakshina Kannada. The correct spelling is 'Bantvāḷa' (ಬಂಟ್ವಾಳ): ṭa with a va-ottu and a long 'ā'. The underlined 'ಬಂಟ್ವಳ' lacks the long ā, option 1 has a ṭha-ottu (ಬಂಟ್ಠಾಳ), and options 3 and 4 break the cluster, so option 2 is right.

    ರಂಗಕರ್ಮಿ ಬಿ. ವಿ. ಕಾರಂತ (ಬಾಬುಕೋಡಿ ವೆಂಕಟರಮಣ ಕಾರಂತ) ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಜನಿಸಿದರು. ಸರಿಯಾದ ರೂಪ 'ಬಂಟ್ವಾಳ' – ಟಕಾರಕ್ಕೆ ವಕಾರ ಒತ್ತು ಮತ್ತು ದೀರ್ಘ 'ಆ'. ಅಡಿಗೆರೆ ಎಳೆದ 'ಬಂಟ್ವಳ'ದಲ್ಲಿ ದೀರ್ಘವಿಲ್ಲ; ಆಯ್ಕೆ 1ರಲ್ಲಿ ಠಕಾರ ಒತ್ತು (ಬಂಟ್ಠಾಳ) ಇದೆ; ಆಯ್ಕೆ 3, 4ರಲ್ಲಿ ಒತ್ತಕ್ಷರವನ್ನೇ ಬಿಡಿಸಲಾಗಿದೆ. ಆದ್ದರಿಂದ ಆಯ್ಕೆ 2 ಸರಿ.

  16. SDA Jan 2026 · P2 · Q6 · General Kannada · Vocabulary & Usage

    ಗುಂಪಿಗೆ ಸೇರದ ಜೋಡಿಯನ್ನು ಗುರುತಿಸಿ.

    1. ಹರ್ಷ × ವಿಷಾದ
    2. ಅಡ್ಡ × ಲಂಬ
    3. ಸೊಲ್ಲು × ಮೌನ
    4. ನಮ್ರ × ವಿನಮ್ರ
    Show answer

    Answer: (4) ನಮ್ರ × ವಿನಮ್ರ

    Three pairs are opposites: harṣa (joy) × viṣāda (sorrow), aḍḍa (horizontal) × lamba (vertical), sollu (speech) × mauna (silence). Namra and vinamra both mean 'humble' – they are synonyms, so that pair does not belong.

    ಹರ್ಷ × ವಿಷಾದ, ಅಡ್ಡ × ಲಂಬ, ಸೊಲ್ಲು (ಮಾತು) × ಮೌನ – ಇವು ವಿರುದ್ಧಾರ್ಥಕ ಜೋಡಿಗಳು. ನಮ್ರ ಮತ್ತು ವಿನಮ್ರ ಎರಡೂ 'ವಿನಯವುಳ್ಳ' ಎಂಬ ಸಮಾನಾರ್ಥಕ ಪದಗಳು; ಆದ್ದರಿಂದ ಈ ಜೋಡಿ ಗುಂಪಿಗೆ ಸೇರದು.

  17. SDA Jan 2026 · P2 · Q14 · General Kannada · Vocabulary & Usage

    ಈ ಕೆಳಗಿನ ಧಾತುಗಳನ್ನು ಅವುಗಳ ಅರ್ಥಗಳೊಂದಿಗೆ ಹೊಂದಿಸಿ ಬರೆಯಿರಿ. ಪಟ್ಟಿ I — ಪಟ್ಟಿ II a. ಅಗೆ — i. ತಿಕ್ಕು b. ಉದ್ದು — ii. ಮುಗಿ c. ತೀರು — iii. ನೆಲತೋಡು d. ಪಿಂಗು — iv. ದೂರವಾಗು ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. a-i, b-ii, c-iv, d-iii
    2. a-ii, b-i, c-iii, d-iv
    3. a-iii, b-ii, c-iv, d-i
    4. a-iii, b-i, c-ii, d-iv
    Show answer

    Answer: (4) a-iii, b-i, c-ii, d-iv

    Explanation: open it in the practice app. It needs the ₹149 All-in-One Pass: one payment for every exam on the site.

  18. SDA Jan 2026 · P2 · Q16 · General Kannada · Vocabulary & Usage

    ಕೆಳಗಿನ ತತ್ಸಮ - ತದ್ಭವಗಳಲ್ಲಿ ಹೊಂದಾಣಿಕೆಯಲ್ಲದ ಜೋಡಿ/ಜೋಡಿಗಳನ್ನು ಗುರುತಿಸಿ. a. ತಾತ - ತಂದೆ b. ಪಾದುಕಾ - ಹಾವುಗೆ c. ಪ್ರಜ್ವಲ - ಪತ್ತನ d. ಚತುಷ್ಕ - ಚೌಕ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. a ಮತ್ತು c
    2. c ಮಾತ್ರ
    3. a ಮಾತ್ರ
    4. b ಮತ್ತು d
    Show answer

    Answer: (2) c ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  19. SDA Jan 2026 · P2 · Q19 · General Kannada · Vocabulary & Usage

    ‘ತವರಿನ ಸೀರೆ’ ಅರ್ಥ ಬರುವ ಗ್ರಾಮ್ಯ ರೂಪವನ್ನು ಗುರುತಿಸಿ.

    1. ತವರ ಉಡುಗೊರೆ
    2. ತವರ್ಬಣ್ಣ
    3. ತವರಸ್ಯಾಲಿ
    4. ತವರಬೀರ
    Show answer

    Answer: (2) ತವರ್ಬಣ್ಣ

    Explanation: open it in the practice app. It needs the ₹149 All-in-One Pass: one payment for every exam on the site.

  20. SDA Jan 2026 · P2 · Q20 · General Kannada · Vocabulary & Usage

    ‘ಕಳುವ್ಯಾರೆ’ ಗ್ರಾಮ್ಯ ರೂಪಕ್ಕೆ ಸರಿಯಾದ ಗ್ರಾಂಥಿಕ ರೂಪ ಗುರುತಿಸಿ.

    1. ಕಳೆದಿದ್ದಾರೆ
    2. ಕಳುಹಿಸಿದ್ದಾರೆ
    3. ಕದ್ದಿದ್ದಾರೆ
    4. ಕಳ್ಳತನ ಮಾಡಿದ್ದಾರೆ
    Show answer

    Answer: (2) ಕಳುಹಿಸಿದ್ದಾರೆ

    Explanation: open it in the practice app. It needs the ₹149 All-in-One Pass: one payment for every exam on the site.

  21. SDA Jan 2026 · P2 · Q24 · General Kannada · Vocabulary & Usage

    ಈ ಕೆಳಗಿನ ಗಾದೆ ಮಾತನ್ನು ಪೂರ್ಣಗೊಳಿಸಿ. ಮೂಗು ತೂರಿಸಿ ______ ಎನಿಸಿಕೊಳ್ಳಬೇಡ.

    1. ಬುದ್ಧಿವಂತ
    2. ಮೂರ್ಖ
    3. ಜಾಣ
    4. ವಿವೇಕಿ
    Show answer

    Answer: (2) ಮೂರ್ಖ

    Explanation: open it in the practice app. It needs the ₹149 All-in-One Pass: one payment for every exam on the site.

  22. SDA Jan 2026 · P2 · Q25 · General Kannada · Vocabulary & Usage

    ಈ ಕೆಳಗಿನವುಗಳಲ್ಲಿ ಯಾವುದು ನುಡಿಗಟ್ಟು ಅಲ್ಲ.

    1. ಅರಣ್ಯ ರೋದನ
    2. ರಾಮಬಾಣ
    3. ಮಾರಣ ಹೋಮ
    4. ಭಲ್ಲೂಕಪತಿ
    Show answer

    Answer: (4) ಭಲ್ಲೂಕಪತಿ

    Explanation: open it in the practice app. It needs the ₹149 All-in-One Pass: one payment for every exam on the site.

  23. SDA Jan 2026 · P2 · Q26 · General Kannada · Vocabulary & Usage

    ಈ ಕೆಳಗೆ ನೀಡಲಾದ ಪದಗಳಲ್ಲಿ ಅನ್ಯದೇಶ್ಯ ಪದವನ್ನು ಗುರುತಿಸಿ. ಕೈ, ಬಿಡು, ಶುರು, ಕಾಲು

    1. ಬಿಡು
    2. ಶುರು
    3. ಕಾಲು
    4. ಕೈ
    Show answer

    Answer: (2) ಶುರು

    Explanation: open it in the practice app. It needs the ₹149 All-in-One Pass: one payment for every exam on the site.

  24. SDA Jan 2026 · P2 · Q30 · General Kannada · Vocabulary & Usage

    ಈ ಕೆಳಗಿನ ಗಾದೆಗಳಲ್ಲಿ ತಪ್ಪಾದ ಗಾದೆಯನ್ನು ಗುರ್ತಿಸಿ.

    1. ಹನುಮಪ್ಪ ಹಗ್ಗ ಕಡಿಯುವಾಗ ಪೂಜಾರಿ ಶ್ಯಾವಿಗೆ ಬೇಡಿದನಂತೆ.
    2. ಹೊಗೆಯಿಲ್ಲದ ಮನೆಯಿಲ್ಲ, ಚಿಂತೆಯಿಲ್ಲದ ಮನವಿಲ್ಲ.
    3. ಹೆದರಿದವನ ಕಣ್ಣಿಗೆ ಹಗ್ಗವೂ ಹೂವೇ.
    4. ಹಿರಿಯ ಮಗ ಆಗಬೇಡ, ಹಿತ್ತಿಲು ಬಾಗಿಲು ತೆಗಿಬೇಡ.
    Show answer

    Answer: (3) ಹೆದರಿದವನ ಕಣ್ಣಿಗೆ ಹಗ್ಗವೂ ಹೂವೇ.

    Explanation: open it in the practice app. It needs the ₹149 All-in-One Pass: one payment for every exam on the site.

  25. SDA Jan 2026 · P2 · Q32 · General Kannada · Vocabulary & Usage

    ಕೆಳಗಿನವುಗಳಲ್ಲಿ ಸಮಾನಾರ್ಥಕ ಪದಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಹೊಂದಿಕೆಯಾಗದ ಗುಂಪನ್ನು/ಗುಂಪುಗಳನ್ನು ಗುರುತಿಸಿ a. ಶ್ವೇತ, ಶುಭ್ರ, ಧವಳ, ಬಿಳುಪು b. ಅಗ್ನಿ, ಅನಲ, ಅನಿಲ, ಪಾವಕ c. ನೃಪ, ಮಹೀಪ, ರಾಹುತ, ನರೇಶ d. ಭೃಂಗ, ಮಧುಪ, ಮಧುಕರ, ದುಂಬಿ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    1. a ಮತ್ತು c
    2. b ಮತ್ತು c
    3. b ಮತ್ತು d
    4. a ಮತ್ತು d
    Show answer

    Answer: (2) b ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  26. SDA Jan 2026 · P2 · Q33 · General Kannada · Vocabulary & Usage

    ಈ ಕೆಳಗಿನ ಸಮಾನಾರ್ಥಕ ಪದಗಳನ್ನು ಹೊಂದಿಸಿ. ಪಟ್ಟಿ I — ಪಟ್ಟಿ II a. ಬಾನ — i. ದುಃಖಿತ b. ಆರ್ತ — ii. ಜೂಜು c. ನಿಶಾ — iii. ರಜನಿ d. ಕೈತವ — iv. ಅನ್ನ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. a-ii, b-iii, c-i, d-iv
    2. a-iii, b-i, c-iv, d-ii
    3. a-iv, b-i, c-iii, d-ii
    4. a-i, b-iii, c-iv, d-ii
    Show answer

    Answer: (3) a-iv, b-i, c-iii, d-ii

    Explanation: open it in the practice app. It needs the ₹149 All-in-One Pass: one payment for every exam on the site.

  27. SDA Feb 2026 · P2 · Q6 · General Kannada · Vocabulary & Usage

    ಈ ಕೆಳಗಿನವುಗಳಲ್ಲಿ ಯಾವ ಜೋಡಿ ತಪ್ಪಾಗಿದೆ? (a) ದಾನ × ಪ್ರತಿಗ್ರಹ (b) ಸ್ಥಾವರ × ಜಂಗಮ (c) ಸದಾಚಾರ × ನಿರಾಚಾರ (d) ಶಾಪ × ತಾಪ

    1. (a) ಮತ್ತು (b)
    2. (b) ಮತ್ತು (c)
    3. (c) ಮತ್ತು (d)
    4. (a) ಮತ್ತು (d)
    Show answer

    Answer: (3) (c) ಮತ್ತು (d)

    Antonym pairs: daana (giving) × pratigraha (accepting) and sthaavara (immovable) × jangama (movable) are correct. The opposite of sadaachaara (good conduct) is duraachaara, not niraachaara; the opposite of shaapa (curse) is vara/anugraha (boon), not taapa (heat/distress). So (c) and (d) are wrong.

    ದಾನ × ಪ್ರತಿಗ್ರಹ (ಕೊಡುವುದು × ಸ್ವೀಕರಿಸುವುದು), ಸ್ಥಾವರ × ಜಂಗಮ (ಚಲಿಸದ × ಚಲಿಸುವ) ಸರಿಯಾದ ವಿರುದ್ಧಾರ್ಥಕ ಜೋಡಿಗಳು. ಸದಾಚಾರಕ್ಕೆ ವಿರುದ್ಧ ಪದ ದುರಾಚಾರ; ಶಾಪಕ್ಕೆ ವಿರುದ್ಧ ಪದ ವರ/ಅನುಗ್ರಹ – ‘ತಾಪ’ ಅಲ್ಲ. ಆದ್ದರಿಂದ (c) ಮತ್ತು (d) ತಪ್ಪಾದ ಜೋಡಿಗಳು.

  28. SDA Feb 2026 · P2 · Q7 · General Kannada · Vocabulary & Usage

    ‘ಅವಲಂಬಿ’ ಪದದ ವಿರುದ್ಧ ಪದ ಯಾವುದು?

    1. ಪರಾವಲಂಬಿ
    2. ಅನಾವಲಂಬಿ
    3. ಅನವಲಂಬಿ
    4. ಪೂರ್ಣಾವಲಂಬಿ
    Show answer

    Answer: (3) ಅನವಲಂಬಿ

    Avalambi = one who depends on something. Its opposite is formed with the negative prefix 'a', which becomes 'an' before a vowel: an + avalambi = anavalambi (not dependent). 'Paraavalambi' is the opposite of 'svaavalambi'; 'anaavalambi' is a wrong form.

    ‘ಅವಲಂಬಿ’ = ಆಶ್ರಯಿಸಿರುವವನು. ನಿಷೇಧಾರ್ಥದ ‘ಅ’ ಉಪಸರ್ಗವು ಸ್ವರದ ಮುಂದೆ ‘ಅನ್’ ಆಗುತ್ತದೆ: ಅನ್ + ಅವಲಂಬಿ = ಅನವಲಂಬಿ (ಆಶ್ರಯಿಸದವನು). ‘ಪರಾವಲಂಬಿ’ ಎಂಬುದು ‘ಸ್ವಾವಲಂಬಿ’ಯ ವಿರುದ್ಧ ಪದ; ‘ಅನಾವಲಂಬಿ’ ತಪ್ಪು ರೂಪ.

  29. SDA Feb 2026 · P2 · Q8 · General Kannada · Vocabulary & Usage

    ಈ ಕೆಳಗಿನವುಗಳಲ್ಲಿ ಸಮಾನಾರ್ಥಕ ಪದಗಳ ಗುಂಪುಗಳನ್ನು ಗುರುತಿಸಿ. (a) ಕೈವಲ್ಯ, ನಿರ್ವಾಣ, ಶ್ರೇಯ, ಮೋಕ್ಷ (b) ಶೋಣಿತ, ರಕ್ತ, ರುಧಿರ, ಕ್ಷತಜ (c) ಶಿರ, ಶೀರ್ಷ, ಮಯ, ಪಲಾಶಿ (d) ಚರಣ, ಪಾದ, ಪ್ಲವ, ಓಘ

    1. (a) ಮತ್ತು (c)
    2. (b) ಮತ್ತು (d)
    3. (a) ಮತ್ತು (b)
    4. (b) ಮತ್ತು (c)
    Show answer

    Answer: (3) (a) ಮತ್ತು (b)

    (a) kaivalya, nirvaana, shreya and moksha all mean liberation (salvation); (b) shonita, rakta, rudhira and kshataja all mean blood. In (c) 'maya' and 'palaashi' (flesh-eater, demon) do not mean head; in (d) 'plava' (boat/leap) and 'ogha' (flood, stream) do not mean foot.

    (a) ಕೈವಲ್ಯ, ನಿರ್ವಾಣ, ಶ್ರೇಯ, ಮೋಕ್ಷ – ಎಲ್ಲವೂ ‘ಮುಕ್ತಿ’ ಎಂಬ ಅರ್ಥ; (b) ಶೋಣಿತ, ರಕ್ತ, ರುಧಿರ, ಕ್ಷತಜ – ಎಲ್ಲವೂ ‘ನೆತ್ತರು’. (c)ಯಲ್ಲಿ ‘ಮಯ’, ‘ಪಲಾಶಿ’ (ಮಾಂಸಾಹಾರಿ, ರಾಕ್ಷಸ) ತಲೆ ಎಂಬ ಅರ್ಥ ಕೊಡುವುದಿಲ್ಲ; (d)ಯಲ್ಲಿ ‘ಪ್ಲವ’ (ದೋಣಿ/ಜಿಗಿತ), ‘ಓಘ’ (ಪ್ರವಾಹ) ಕಾಲು ಎಂಬ ಅರ್ಥದ ಪದಗಳಲ್ಲ.

  30. SDA Feb 2026 · P2 · Q9 · General Kannada · Vocabulary & Usage

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಅರ್ಕ — (i) ಬೆಂಕಿ (b) ಅಘ — (ii) ಹೂವು (c) ವಹ್ನಿ — (iii) ಸೂರ್ಯ (d) ಅಲರ್ — (iv) ಪಾಪ ಸಂಕೇತಗಳು :

    1. a - ii, b - iii, c - iv, d - i
    2. a - iii, b - iv, c - i, d - ii
    3. a - iv, b - iii, c - ii, d - i
    4. a - i, b - ii, c - iii, d - iv
    Show answer

    Answer: (2) a - iii, b - iv, c - i, d - ii

    Arka = sun, agha = sin, vahni = fire, alar (Halegannada) = flower. So a-iii, b-iv, c-i, d-ii.

    ಅರ್ಕ = ಸೂರ್ಯ, ಅಘ = ಪಾಪ, ವಹ್ನಿ = ಬೆಂಕಿ (ಅಗ್ನಿ), ಅಲರ್ (ಹಳಗನ್ನಡ) = ಹೂವು. ಆದ್ದರಿಂದ a-iii, b-iv, c-i, d-ii.

  31. SDA Feb 2026 · P2 · Q10 · General Kannada · Vocabulary & Usage

    ಗಾದೆ ಮಾತನ್ನು ಪೂರ್ಣಗೊಳಿಸಿ. ಬಾಯಿಯಿದ್ದವ ______ ಗೆಲ್ಲುತ್ತಾನೆ.

    1. ಬರದಲ್ಲೂ
    2. ಪಡಿಪಾಟಲಿನಲ್ಲೂ
    3. ದುಃಖದಲ್ಲೂ
    4. ಬೇಸರದಲ್ಲೂ
    Show answer

    Answer: (1) ಬರದಲ್ಲೂ

    The proverb is 'Baayiyiddava baradallu gelluttaane' – one who can speak up wins (survives) even in a famine (bara = drought/famine). It means a person who can talk and ask for help gets by even in hard times.

    ಗಾದೆ: ‘ಬಾಯಿಯಿದ್ದವ ಬರದಲ್ಲೂ ಗೆಲ್ಲುತ್ತಾನೆ’. ಬರ = ಕ್ಷಾಮ. ಮಾತನಾಡುವ ಚಾತುರ್ಯ ಇರುವವನು ಕಷ್ಟಕಾಲದಲ್ಲೂ (ಬರಗಾಲದಲ್ಲೂ) ಬದುಕನ್ನು ಗೆಲ್ಲುತ್ತಾನೆ ಎಂಬುದು ಇದರ ಅರ್ಥ.

  32. SDA Feb 2026 · P2 · Q11 · General Kannada · Vocabulary & Usage

    ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವ ನುಡಿಗಟ್ಟುಗಳ ಜೋಡಿಗಳನ್ನು ಗುರುತಿಸಿರಿ. (ಎ) ಬಾಲಕತ್ತರಿಸು - ಉಗ್ರವಾಗಿ ಕತ್ತರಿಸು (ಬಿ) ರೈಲು ಬಿಡು - ಸುಳ್ಳು ಹೇಳು (ಸಿ) ಉಭಯಸಂಕಟ - ಇಬ್ಬರೂ ಸಂಕಟಪಡುವುದು (ಡಿ) ಪ್ರಾಣಹಿಂಡು - ಬಹಳ ಪೀಡಿಸು

    1. (ಎ) ಮತ್ತು (ಬಿ)
    2. (ಬಿ) ಮತ್ತು (ಡಿ)
    3. (ಸಿ) ಮತ್ತು (ಬಿ)
    4. (ಡಿ) ಮತ್ತು (ಎ)
    Show answer

    Answer: (2) (ಬಿ) ಮತ್ತು (ಡಿ)

    Explanation: open it in the practice app. It needs the ₹149 All-in-One Pass: one payment for every exam on the site.

  33. SDA Feb 2026 · P2 · Q12 · General Kannada · Vocabulary & Usage

    ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (a) ಚಟ್ನಿಯಾಗು — (i) ಗರ್ವ ತುಂಬು (b) ದಾರಿದೀಪ — (ii) ಅರೆದು ಹೋಗು (c) ನಾಯಿಜನ್ಮ — (iii) ಮಾರ್ಗದರ್ಶಿ (d) ನೆತ್ತಿಗೇರು — (iv) ಹೀನಬಾಳು ಸಂಕೇತಗಳು :

    1. a - iv, b - ii, c - i, d - iii
    2. a - i, b - iii, c - iv, d - ii
    3. a - ii, b - iii, c - iv, d - i
    4. a - iv, b - iii, c - i, d - ii
    Show answer

    Answer: (3) a - ii, b - iii, c - iv, d - i

    Explanation: open it in the practice app. It needs the ₹149 All-in-One Pass: one payment for every exam on the site.

  34. SDA Feb 2026 · P2 · Q17 · General Kannada · Vocabulary & Usage

    ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ. ಭೂಮಿಯ ಗುರುತ್ವಕರ್ಷಣ ಶಕ್ತಿಯಿಂದ ಸೃಷ್ಟಿಯ ಪ್ರಕ್ರಿಯೆ ನಡೆಯತ್ತಾ ಬಂದಿದೆ. (ಅಡಿಗೆರೆ ಎಳೆದ ಪದ: ಗುರುತ್ವಕರ್ಷಣ)

    1. ಗುರುತ್ವಖರ್ಷಣ
    2. ಗುರುತ್ವಕರ್ಷಾಣ
    3. ಗುರುತ್ವಾಕರ್ಷಣ
    4. ಗುರುತ್ವಾಕರ್ಶಣ
    Show answer

    Answer: (3) ಗುರುತ್ವಾಕರ್ಷಣ

    Explanation: open it in the practice app. It needs the ₹149 All-in-One Pass: one payment for every exam on the site.

  35. SDA Feb 2026 · P2 · Q18 · General Kannada · Vocabulary & Usage

    ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ. ನಾಳೆ ಕಘ್ರಾಸ ಸೂರ್ಯಗ್ರಹಣವಿದೆ. (ಅಡಿಗೆರೆ ಎಳೆದ ಪದ: ಕಘ್ರಾಸ)

    1. ಕಗ್ರಾಸ
    2. ಖಘ್ರಾಸ
    3. ಖಗ್ರಾಸ
    4. ಕಘ್ರಾಸ
    Show answer

    Answer: (3) ಖಗ್ರಾಸ

    Explanation: open it in the practice app. It needs the ₹149 All-in-One Pass: one payment for every exam on the site.

  36. SDA Feb 2026 · P2 · Q22 · General Kannada · Vocabulary & Usage

    ಕೆಳಗೆ ನೀಡಿರುವ ವಿರುದ್ಧ ಪದಗಳಲ್ಲಿ ತಪ್ಪಾಗಿರುವ ಜೋಡಿಗಳನ್ನು ಗುರುತಿಸಿ. (a) ಔದಾರ್ಯ × ಅನೌದಾರ್ಯ (b) ವ್ಯಯ × ಅಪವ್ಯಯ (c) ಶಮನ × ಉಲ್ಬಣ (d) ಮಧುರ × ಸುಮಧುರ

    1. (a) ಮತ್ತು (b) ಮಾತ್ರ
    2. (c) ಮಾತ್ರ
    3. (a) ಮತ್ತು (d) ಮಾತ್ರ
    4. (d) ಮಾತ್ರ
    Show answer

    Answer: (4) (d) ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  37. SDA Feb 2026 · P2 · Q23 · General Kannada · Vocabulary & Usage

    ಅಡಿಗೆರೆ ಎಳೆದ ಪದದ ವಿರುದ್ಧ ಪದ ಗುರುತಿಸಿ. ವ್ಯಕ್ತಿಯು ಅನೈತಿಕ ಮಾರ್ಗದಿಂದ ಅಧಃಪತನದ ದಾರಿ ಹಿಡಿಯುತ್ತಾನೆ. (ಅಡಿಗೆರೆ ಎಳೆದ ಪದ: ಅಧಃಪತನ)

    1. ಪತನ
    2. ಉತ್ಥಾನ
    3. ಅಧಿಕೃತ
    4. ಅನನುಪತನ
    Show answer

    Answer: (2) ಉತ್ಥಾನ

    Explanation: open it in the practice app. It needs the ₹149 All-in-One Pass: one payment for every exam on the site.

  38. SDA Feb 2026 · P2 · Q24 · General Kannada · Vocabulary & Usage

    “ಅಮ್ಮೋ! ನಿನ್ನ ಗಂಡ, ಕಿಕ್ಕೇರಿ ನಂಜನ್ನ ಹಿಡಿಯಾಕೆ ಹೋಗವ್ನೆ.” ಈ ವಾಕ್ಯದ ಸರಿಯಾದ ಗ್ರಾಂಥಿಕ ರೂಪವನ್ನು ಗುರುತಿಸಿ.

    1. ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯಾಕೆ ಹೋಗವನೆ.
    2. ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯೋದಕ್ಕೆ ಹೋಗಿದ್ದಾನೆ.
    3. ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯೋಕೆ ಹೋಗಿದ್ದಾನೆ.
    4. ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯುವುದಕ್ಕೆ ಹೋಗಿದ್ದಾನೆ.
    Show answer

    Answer: (4) ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯುವುದಕ್ಕೆ ಹೋಗಿದ್ದಾನೆ.

    Explanation: open it in the practice app. It needs the ₹149 All-in-One Pass: one payment for every exam on the site.

  39. SDA Feb 2026 · P2 · Q25 · General Kannada · Vocabulary & Usage

    ಬ್ಯಾಸಗಿ, ಪುನ್ನುಳ್ಳ, ತ್ವಾಟ, ಹೊಳಿ – ಈ ಪದಗಳ ಗ್ರಾಂಥಿಕ ರೂಪದ ಸರಿಯಾದ ಆಯ್ಕೆಯನ್ನು ಗುರುತಿಸಿ.

    1. ಬೇಸಗಿ, ಪುಣ್ಯಯುಳ್ಳ, ತೋಟ, ಹೊಳಿ
    2. ಬೇಸಗೆ, ಪುಣ್ಯವುಳ್ಳ, ತೋಟ, ಹೊಳೆ
    3. ಬೇಸಗೆ, ಪುಣ್ಯವನ್ನುಳ್ಳ, ತ್ವೋಟ, ಹೊಳೆ
    4. ಬೇಸಗಿ, ಪುಣ್ಯವುಳ್ಳ, ತೋಟ, ಹೊಳಿ
    Show answer

    Answer: (2) ಬೇಸಗೆ, ಪುಣ್ಯವುಳ್ಳ, ತೋಟ, ಹೊಳೆ

    Explanation: open it in the practice app. It needs the ₹149 All-in-One Pass: one payment for every exam on the site.

  40. SDA Feb 2026 · P2 · Q32 · General Kannada · Vocabulary & Usage

    ಇಂಗ್ಲಿಷ್‌ನ Personal Letters ಗೆ ಸಂವಾದಿಯಾಗಿ ಬಳಕೆಯಾಗುವ ವೈಯಕ್ತಿಕ ಪತ್ರಗಳನ್ನು ಹೀಗೂ ಕರೆಯುವರು.

    1. ಮನವಿ ಪತ್ರ
    2. ಖಾಸಗಿ ಪತ್ರ
    3. ವ್ಯವಹಾರಿಕ ಪತ್ರ
    4. ಔಪಚಾರಿಕ ಪತ್ರ
    Show answer

    Answer: (2) ಖಾಸಗಿ ಪತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  41. SDA Feb 2026 · P2 · Q33 · General Kannada · Vocabulary & Usage

    ಔಪಚಾರಿಕ ಪತ್ರಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ.

    1. ಪತ್ರದ ವಿಷಯ ಬರೆಯಬೇಕು.
    2. ತಪ್ಪಾಗದಂತೆ ಮುಖ್ಯ ಅಂಶಗಳನ್ನು ಮಂಡಿಸುವುದು.
    3. ಪತ್ರದ ಕೊನೆಗೆ ಎಡಗಡೆ ಪತ್ರ ಬರೆಯುವವರ ವಿಳಾಸ ಬರೆಯಬೇಕು.
    4. ವ್ಯಕ್ತಿಯ ಭಾವನೆಗಳನ್ನು ಪ್ರಭಾವಿಯಾಗಿ ಮಂಡಿಸುವುದು.
    Show answer

    Answer: (3) ಪತ್ರದ ಕೊನೆಗೆ ಎಡಗಡೆ ಪತ್ರ ಬರೆಯುವವರ ವಿಳಾಸ ಬರೆಯಬೇಕು.

    Explanation: open it in the practice app. It needs the ₹149 All-in-One Pass: one payment for every exam on the site.

  42. SDA Feb 2026 · P2 · Q34 · General Kannada · Vocabulary & Usage

    ಇಂಗ್ಲಿಷ್ - ಕನ್ನಡ ಅಂಕಿಗಳ ಸರಿಯಾದ ಕಾಲಾನುಕ್ರಮಣಿಕೆಯಲ್ಲಿ ಹೊಂದಿಸಿ ಬರೆಯಿರಿ. ಪಟ್ಟಿ-I — ಪಟ್ಟಿ-II (ಎ) 1626 — (I) ೧೬೩೯ (ಬಿ) 1629 — (II) ೧೬೨೬ (ಸಿ) 1632 — (III) ೧೬೩೨ (ಡಿ) 1639 — (IV) ೧೬೨೯ ಸಂಕೇತಗಳು :

    1. ಎ - III, ಬಿ - II, ಸಿ - I, ಡಿ - IV
    2. ಎ - II, ಬಿ - IV, ಸಿ - III, ಡಿ - I
    3. ಎ - I, ಬಿ - II, ಸಿ - III, ಡಿ - IV
    4. ಎ - IV, ಬಿ - II, ಸಿ - III, ಡಿ - I
    Show answer

    Answer: (2) ಎ - II, ಬಿ - IV, ಸಿ - III, ಡಿ - I

    Explanation: open it in the practice app. It needs the ₹149 All-in-One Pass: one payment for every exam on the site.

Literature & Writers

  1. FDA Jan 2026 · P2 · Q24 · General Kannada · Literature & Writers

    ಈ ಕೆಳಗಿನವುಗಳಲ್ಲಿ ಬಸವಣ್ಣನವರಿಂದ ರಚಿತವಾಗಿರದ ವಚನದ ಸಾಲನ್ನು ಗುರುತಿಸಿ.

    1. ಉಳ್ಳವರು ಶಿವಾಲಯವ ಮಾಡುವರು
    2. ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
    3. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ
    4. ಕಲ್ಲನಾಗರ ಕಂಡರೆ ಹಾಲೆರೆ ಎಂಬರು
    Show answer

    Answer: (2) ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ

    Explanation: open it in the practice app. It needs the ₹149 All-in-One Pass: one payment for every exam on the site.

  2. SDA Jan 2026 · P2 · Q2 · General Kannada · Literature & Writers

    ಈ ಕೆಳಗಿನ ನಾಡಗೀತೆಯಲ್ಲಿ ಅಡಿಗೆರೆ ಎಳೆದ ಪದಗಳಲ್ಲಿ ತಪ್ಪಾಗಿರುವ ಪದಗಳನ್ನು ಗುರುತಿಸಿ : ತೈಲಪಾ ಹೊಯ್ಸಳರಾಳಿದ ನಾಡೇ, ಢಂಕಣ ಜಕಣರ ನೆಚ್ಚಿನ ಬೀಡೇ, ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗ (ಅಡಿಗೆರೆ ಎಳೆದ ಪದ: a ತೈಲಪಾ / b ಹೊಯ್ಸಳರಾಳಿದ / c ಢಂಕಣ / d ಶರಾವತಿ)

    1. a ಮತ್ತು d
    2. a ಮತ್ತು c
    3. c ಮತ್ತು d
    4. b ಮತ್ತು d
    Show answer

    Answer: (2) a ಮತ್ತು c

    Kuvempu's state anthem 'Jaya Bharata Jananiya Tanujate' reads 'Tailapa Hoysalaraalida naade, Dankana Jakanara nechchina beede, Krishna Sharavati Tunga…'. The king is Tailapa (not 'Tailapaa') and the sculptor is Dankana (with ḍa, not ḍha). 'Hoysalaraalida' and 'Sharavati' are correct, so the wrong words are a and c.

    ಕುವೆಂಪು ಅವರ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯಲ್ಲಿ ಸರಿಯಾದ ಸಾಲು: 'ತೈಲಪ ಹೊಯ್ಸಳರಾಳಿದ ನಾಡೆ, ಡಂಕಣ ಜಕಣರ ನೆಚ್ಚಿನ ಬೀಡೆ, ಕೃಷ್ಣಾ ಶರಾವತಿ ತುಂಗಾ…'. ಚಾಲುಕ್ಯ ಅರಸ 'ತೈಲಪ' ('ತೈಲಪಾ' ಅಲ್ಲ), ಶಿಲ್ಪಿ 'ಡಂಕಣ' ('ಢಂಕಣ' ಅಲ್ಲ). 'ಹೊಯ್ಸಳರಾಳಿದ', 'ಶರಾವತಿ' ಸರಿ. ಆದ್ದರಿಂದ a ಮತ್ತು c ತಪ್ಪಾದ ಪದಗಳು.

  3. SDA Jan 2026 · P2 · Q15 · General Kannada · Literature & Writers

    ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರುತಿಸಿರಿ.

    1. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು
    2. ದೇ.ಜ.ಗೌ. - ಹೋರಾಟದ ಬದುಕು
    3. ಸಿದ್ದಲಿಂಗಯ್ಯ- ಹುಳಿಮಾವಿನ ಮರ
    4. ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ
    Show answer

    Answer: (3) ಸಿದ್ದಲಿಂಗಯ್ಯ- ಹುಳಿಮಾವಿನ ಮರ

    Explanation: open it in the practice app. It needs the ₹149 All-in-One Pass: one payment for every exam on the site.

  4. SDA Feb 2026 · P2 · Q13 · General Kannada · Literature & Writers

    ಆಧುನಿಕ ಕನ್ನಡ ಸಾಹಿತ್ಯದಲ್ಲಿ ರಚನೆಯಾದ ಮೊದಲ ಸಣ್ಣ ಕತೆಯನ್ನು ಗುರುತಿಸಿ.

    1. ನನ್ನ ಚಿಕ್ಕತಾಯಿ
    2. ಕಮಲಪುರದ ಹೊಟ್ಲಿನಲ್ಲಿ
    3. ಕದ್ದವರು ಯಾರು?
    4. ಮಲ್ಲೇಶಿಯ ನಲ್ಲೆಯರು
    Show answer

    Answer: (1) ನನ್ನ ಚಿಕ್ಕತಾಯಿ / (2) ಕಮಲಪುರದ ಹೊಟ್ಲಿನಲ್ಲಿ

    Explanation: open it in the practice app. It needs the ₹149 All-in-One Pass: one payment for every exam on the site.

  5. SDA Feb 2026 · P2 · Q26 · General Kannada · Literature & Writers

    ಗದ್ಯ-ಪದ್ಯ ಮಿಶ್ರಣವಾಗಿರುವ ಕಾವ್ಯ ಪ್ರಕಾರವನ್ನು ಏನೆಂದು ಕರೆಯುತ್ತಾರೆ?

    1. ರಗಳೆ
    2. ತ್ರಿಪದಿ
    3. ಚಂಪೂ
    4. ಸಾಂಗತ್ಯ
    Show answer

    Answer: (3) ಚಂಪೂ

    Explanation: open it in the practice app. It needs the ₹149 All-in-One Pass: one payment for every exam on the site.