Learn with Anil · KEA FDA & SDA PYQsPractise online →Subscribe ₹149

KEA FDA SDA Indian Constitution & Polity previous year questions with answers

Every Indian Constitution & Polity question asked in the KEA FDA & SDA papers on this site, grouped by topic. Answers come from KEA's revised (final) keys; each has a short explanation (free here for a sample, all of them in the practice app).

ಕೆಇಎ ಎಫ್‌ಡಿಎ ಎಸ್‌ಡಿಎ ಭಾರತದ ಸಂವಿಧಾನ ಮತ್ತು ರಾಜ್ಯಶಾಸ್ತ್ರ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise Indian Constitution & Polity online

Constitution & Rights

  1. FDA Jan 2026 · P1 · Q26 · Indian Constitution & Polity · Constitution & Rights

    Match List-I with List-II and select the correct answer using the codes given below: List-I (Provision) — List-II (Article) (a) Residuary Power of Legislation — (i) Article 263 (b) Interstate Council — (ii) Article 266 (c) All India Services — (iii) Article 312 (d) Consolidated Fund of India — (iv) Article 248 Codes:

    1. a-iv, b-ii, c-iii, d-i
    2. a-iii, b-i, c-iv, d-ii
    3. a-iv, b-i, c-iii, d-ii
    4. a-iii, b-ii, c-iv, d-i

    ಈ ಕೆಳಗಿನ ಸಂಕೇತಗಳನ್ನು ಬಳಸಿ ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಬರೆಯಿರಿ. ಪಟ್ಟಿ-I (ನಿಬಂಧನೆ) — ಪಟ್ಟಿ-II (ಅನುಚ್ಛೇದ) (a) ಶಾಸಕಾಂಗದ ಶೇಷಾಧಿಕಾರಗಳು — (i) 263 ಅನುಚ್ಛೇದ (b) ಅಂತರರಾಜ್ಯ ಮಂಡಳಿ — (ii) 266 ಅನುಚ್ಛೇದ (c) ಅಖಿಲ ಭಾರತೀಯ ಸೇವೆಗಳು — (iii) 312 ಅನುಚ್ಛೇದ (d) ಭಾರತದ ಸಂಚಿತ ನಿಧಿ — (iv) 248 ಅನುಚ್ಛೇದ ಸಂಕೇತಗಳು :

    1. a-iv, b-ii, c-iii, d-i
    2. a-iii, b-i, c-iv, d-ii
    3. a-iv, b-i, c-iii, d-ii
    4. a-iii, b-ii, c-iv, d-i
    Show answer

    Answer: (3) a-iv, b-i, c-iii, d-ii

    Explanation: open it in the practice app. It needs the ₹149 All-in-One Pass: one payment for every exam on the site.

  2. SDA Jan 2026 · P1 · Q2 · Indian Constitution & Polity · Constitution & Rights

    Who has the power to prescribe qualifications to acquire Indian citizenship ?

    1. The President
    2. The Governor
    3. The State Legislature
    4. The Parliament

    ಭಾರತೀಯ ಪೌರತ್ವವನ್ನು ಪಡೆಯಲು ಅರ್ಹತೆಗಳನ್ನು ನಿಗದಿಗೊಳಿಸುವ ಅಧಿಕಾರ ಯಾರಿಗೆ ಇದೆ ?

    1. ರಾಷ್ಟ್ರಪತಿಗಳು
    2. ರಾಜ್ಯಪಾಲರು
    3. ರಾಜ್ಯ ಶಾಸಕಾಂಗ
    4. ಸಂಸತ್ತು
    Show answer

    Answer: (4) The Parliament

    ಉತ್ತರ: (4) ಸಂಸತ್ತು

    Article 11 empowers Parliament to make any provision on the acquisition and termination of citizenship; citizenship is also in the Union List. Using this power Parliament enacted the Citizenship Act, 1955, which lays down how citizenship is acquired (birth, descent, registration, naturalisation, incorporation of territory).

    ಸಂವಿಧಾನದ 11 ನೇ ವಿಧಿಯು ಪೌರತ್ವವನ್ನು ಪಡೆಯುವ ಮತ್ತು ಕಳೆದುಕೊಳ್ಳುವ ಕುರಿತು ಕಾನೂನು ರಚಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ; ಪೌರತ್ವವು ಕೇಂದ್ರ ಪಟ್ಟಿಯ ವಿಷಯವೂ ಆಗಿದೆ. ಈ ಅಧಿಕಾರದಡಿ ಸಂಸತ್ತು ಪೌರತ್ವ ಕಾಯ್ದೆ, 1955 ನ್ನು ರೂಪಿಸಿದ್ದು, ಜನನ, ವಂಶ, ನೋಂದಣಿ, ದೇಶೀಕರಣ ಮತ್ತು ಪ್ರದೇಶ ಸೇರ್ಪಡೆಯ ಮೂಲಕ ಪೌರತ್ವ ಪಡೆಯುವ ವಿಧಾನಗಳನ್ನು ನಿಗದಿಪಡಿಸಿದೆ.

  3. SDA Jan 2026 · P1 · Q3 · Indian Constitution & Polity · Constitution & Rights

    Consider the following statements regarding secularism in the Constitution of India : Statement I : The term ‘Secular’ was added to the Preamble by the 42nd Constitutional Amendment Act of 1976. Statement II : Articles 25 – 28, guaranteeing freedom of religion, mandate India to be a secular state. Which one of the following is correct with respect to the above statements ?

    1. Both Statement I and Statement II are correct and Statement II explains Statement I.
    2. Both Statement I and Statement II are correct, but Statement II does not explain Statement I.
    3. Statement I is correct, but Statement II is incorrect.
    4. Statement I is incorrect, but Statement II is correct.

    ಭಾರತದ ಸಂವಿಧಾನದಲ್ಲಿನ ಜಾತ್ಯಾತೀತತೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : ಹೇಳಿಕೆ I : ‘ಜಾತ್ಯಾತೀತ’ ಪದವನ್ನು 1976 ರ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪ್ರಸ್ತಾವನೆಗೆ ಸೇರಿಸಲಾಯಿತು. ಹೇಳಿಕೆ II : ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಗೊಳಿಸುವ 25 ರಿಂದ 28ನೇ ಸಾಂವಿಧಾನಿಕ ವಿಧಿಗಳು ಭಾರತವು ಜಾತ್ಯಾತೀತ ರಾಷ್ಟ್ರವಾಗಿರಲು ಆದೇಶಿಸುತ್ತದೆ. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ.

    1. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.
    2. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ನ್ನು ಹೇಳಿಕೆ II ವಿವರಿಸುವುದಿಲ್ಲ.
    3. ಹೇಳಿಕೆ I ಸರಿ ಆದರೆ, ಹೇಳಿಕೆ II ತಪ್ಪು.
    4. ಹೇಳಿಕೆ I ತಪ್ಪು ಆದರೆ, ಹೇಳಿಕೆ II ಸರಿ.
    Show answer

    Answer: (1) Both Statement I and Statement II are correct and Statement II explains Statement I.

    ಉತ್ತರ: (1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.

    The 42nd Amendment (1976) added 'Socialist' and 'Secular' to the Preamble, so Statement I is right. Articles 25–28 (freedom of conscience and religion, freedom to manage religious affairs, no tax for promoting a religion, no religious instruction in State-funded institutions) already made the Indian State secular; the 1976 amendment only made this explicit, so per KEA's key Statement II explains Statement I.

    1976 ರ 42ನೇ ತಿದ್ದುಪಡಿಯು ‘ಸಮಾಜವಾದಿ’ ಮತ್ತು ‘ಜಾತ್ಯಾತೀತ’ ಪದಗಳನ್ನು ಪ್ರಸ್ತಾವನೆಗೆ ಸೇರಿಸಿತು; ಆದ್ದರಿಂದ ಹೇಳಿಕೆ I ಸರಿ. 25 ರಿಂದ 28ನೇ ವಿಧಿಗಳು (ಮನಸ್ಸಾಕ್ಷಿ ಮತ್ತು ಧರ್ಮ ಸ್ವಾತಂತ್ರ್ಯ, ಧಾರ್ಮಿಕ ವ್ಯವಹಾರಗಳ ನಿರ್ವಹಣೆ, ಧರ್ಮ ಪ್ರಚಾರಕ್ಕೆ ತೆರಿಗೆ ಇಲ್ಲ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ಇಲ್ಲ) ಮೊದಲಿನಿಂದಲೇ ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿಸಿದ್ದವು; 1976 ರ ತಿದ್ದುಪಡಿ ಇದನ್ನು ಸ್ಪಷ್ಟವಾಗಿ ಘೋಷಿಸಿತು. ಕೆಇಎ ಕೀ ಪ್ರಕಾರ ಹೇಳಿಕೆ II ಹೇಳಿಕೆ I ನ್ನು ವಿವರಿಸುತ್ತದೆ.

  4. SDA Jan 2026 · P1 · Q5 · Indian Constitution & Polity · Constitution & Rights

    Identify the Article and Part, with reference to Amendment of the Constitution :

    1. Article 366 and Part XI
    2. Article 367 and Part XI
    3. Article 368 and Part XX
    4. Article 368 and Part XXI

    ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ವಿಧಿ ಮತ್ತು ಭಾಗವನ್ನು ಗುರುತಿಸಿ

    1. 366 ನೇ ವಿಧಿ ಮತ್ತು ಭಾಗ XI
    2. 367 ನೇ ವಿಧಿ ಮತ್ತು ಭಾಗ XI
    3. 368 ನೇ ವಿಧಿ ಮತ್ತು ಭಾಗ XX
    4. 368 ನೇ ವಿಧಿ ಮತ್ತು ಭಾಗ XXI
    Show answer

    Answer: (3) Article 368 and Part XX

    ಉತ್ತರ: (3) 368 ನೇ ವಿಧಿ ಮತ್ತು ಭಾಗ XX

    Part XX of the Constitution contains a single article, Article 368, which gives Parliament the power to amend the Constitution and lays down the procedure. Articles 366 (definitions) and 367 (interpretation) are in Part XIX; Part XI deals with Centre–State relations and Part XXI with temporary, transitional and special provisions.

    ಸಂವಿಧಾನದ XX ನೇ ಭಾಗದಲ್ಲಿ 368 ನೇ ವಿಧಿ ಒಂದೇ ಇದ್ದು, ಅದು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಮತ್ತು ವಿಧಾನವನ್ನು ಸಂಸತ್ತಿಗೆ ನೀಡುತ್ತದೆ. 366 (ವ್ಯಾಖ್ಯಾನಗಳು) ಮತ್ತು 367 (ಅರ್ಥೈಸುವಿಕೆ) ನೇ ವಿಧಿಗಳು XIX ನೇ ಭಾಗದಲ್ಲಿವೆ; XI ನೇ ಭಾಗ ಕೇಂದ್ರ–ರಾಜ್ಯ ಸಂಬಂಧಗಳು ಹಾಗೂ XXI ನೇ ಭಾಗ ತಾತ್ಕಾಲಿಕ, ಪರಿವರ್ತನಾ ಮತ್ತು ವಿಶೇಷ ಉಪಬಂಧಗಳಿಗೆ ಸಂಬಂಧಿಸಿವೆ.

  5. SDA Jan 2026 · P1 · Q7 · Indian Constitution & Polity · Constitution & Rights

    Match the sources with the features that have been borrowed in the Indian Constitution : List I — List II (Source) — (Borrowed feature) a. Constitution of Ireland — i. Concurrent List b. Constitution of Australia — ii. Procedure for amending the Constitution and the procedure for electing members of the Rajya Sabha c. Constitution of France — iii. Directive Principles of State Policy d. Constitution of South Africa — iv. Liberty and Fraternity in the Preamble Choose the correct answer from the options given below :

    1. a-ii, b-iii, c-i, d-iv
    2. a-iv, b-ii, c-iii, d-i
    3. a-iii, b-i, c-iv, d-ii
    4. a-i, b-iv, c-ii, d-iii

    ಭಾರತ ಸಂವಿಧಾನ ಎರವಲು ಪಡೆದ ಲಕ್ಷಣಗಳ ಮೂಲಗಳನ್ನು ಹೊಂದಿಸಿ ಬರೆಯಿರಿ. ಪಟ್ಟಿ I — ಪಟ್ಟಿ II (ಮೂಲಗಳು) — (ಎರವಲು ಪಡೆದ ಲಕ್ಷಣ) a. ಐರ್ಲೆಂಡ್ ಸಂವಿಧಾನ — i. ಸಮವರ್ತಿ ಪಟ್ಟಿ b. ಆಸ್ಟ್ರೇಲಿಯಾ ಸಂವಿಧಾನ — ii. ಸಂವಿಧಾನ ತಿದ್ದುಪಡಿ ವಿಧಾನ ಮತ್ತು ರಾಜ್ಯ ಸಭೆಗೆ ಸದಸ್ಯರನ್ನು ಚುನಾಯಿಸುವ ವಿಧಾನ c. ಫ್ರಾನ್ಸ್ ಸಂವಿಧಾನ — iii. ರಾಜ್ಯ ನೀತಿಯ ನಿರ್ದೇಶಕ ತತ್ವಗಳು d. ದಕ್ಷಿಣ ಆಫ್ರಿಕಾ ಸಂವಿಧಾನ — iv. ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ ಮತ್ತು ಭಾತೃತ್ವ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    1. a-ii, b-iii, c-i, d-iv
    2. a-iv, b-ii, c-iii, d-i
    3. a-iii, b-i, c-iv, d-ii
    4. a-i, b-iv, c-ii, d-iii
    Show answer

    Answer: (3) a-iii, b-i, c-iv, d-ii

    Ireland gave the Directive Principles of State Policy (a-iii); Australia the Concurrent List, freedom of trade and joint sitting (b-i); France the ideals of liberty, equality and fraternity and the republic (c-iv); South Africa the procedure for amending the Constitution and electing Rajya Sabha members (d-ii).

    ಐರ್ಲೆಂಡ್‌ನಿಂದ ರಾಜ್ಯ ನೀತಿಯ ನಿರ್ದೇಶಕ ತತ್ವಗಳು (a-iii); ಆಸ್ಟ್ರೇಲಿಯಾದಿಂದ ಸಮವರ್ತಿ ಪಟ್ಟಿ, ವ್ಯಾಪಾರ ಸ್ವಾತಂತ್ರ್ಯ ಮತ್ತು ಜಂಟಿ ಅಧಿವೇಶನ (b-i); ಫ್ರಾನ್ಸ್‌ನಿಂದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆದರ್ಶಗಳು ಮತ್ತು ಗಣರಾಜ್ಯ (c-iv); ದಕ್ಷಿಣ ಆಫ್ರಿಕಾದಿಂದ ಸಂವಿಧಾನ ತಿದ್ದುಪಡಿ ವಿಧಾನ ಮತ್ತು ರಾಜ್ಯಸಭಾ ಸದಸ್ಯರ ಚುನಾವಣಾ ವಿಧಾನ (d-ii) ಎರವಲು ಪಡೆಯಲಾಗಿದೆ.

  6. SDA Jan 2026 · P1 · Q9 · Indian Constitution & Polity · Constitution & Rights

    Consider the following statements regarding 101st Constitutional Amendment of the Constitution of India : a. It was passed by the Parliament in 2015. b. It paved the way for GST. c. It provided for the establishment of the GST Council. Which of the above statements is/are incorrect ?

    1. Only a
    2. Only a and b
    3. a, b and c
    4. Only b and c

    ಭಾರತದ ಸಂವಿಧಾನದ 101 ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a. ಸಂಸತ್ತು ಇದನ್ನು 2015 ರಲ್ಲಿ ಅಂಗೀಕರಿಸಿತು. b. ಇದು ಜಿ.ಎಸ್.ಟಿ.ಗೆ ಅನುವು ಮಾಡಿಕೊಟ್ಟಿತು. c. ಇದು ಜಿ.ಎಸ್.ಟಿ. ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿತು. ಈ ಮೇಲಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ ?

    1. a ಮಾತ್ರ
    2. a ಮತ್ತು b ಮಾತ್ರ
    3. a, b ಮತ್ತು c
    4. b ಮತ್ತು c ಮಾತ್ರ
    Show answer

    Answer: (1) Only a

    ಉತ್ತರ: (1) a ಮಾತ್ರ

    The 122nd Amendment Bill (GST) was passed by the Lok Sabha in 2015, but Parliament completed its passage only in August 2016 (Rajya Sabha 3 Aug, Lok Sabha 8 Aug); it received assent on 8 September 2016 as the 101st Amendment. So statement a is incorrect. It paved the way for GST and inserted Article 279A creating the GST Council, so b and c are correct.

    ಜಿ.ಎಸ್.ಟಿ. ಕುರಿತ 122ನೇ ತಿದ್ದುಪಡಿ ಮಸೂದೆಯನ್ನು 2015 ರಲ್ಲಿ ಲೋಕಸಭೆ ಅಂಗೀಕರಿಸಿದರೂ, ಸಂಸತ್ತಿನ ಅಂಗೀಕಾರ ಪೂರ್ಣಗೊಂಡಿದ್ದು 2016 ರ ಆಗಸ್ಟ್‌ನಲ್ಲಿ; 8 ಸೆಪ್ಟೆಂಬರ್ 2016 ರಂದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು 101ನೇ ತಿದ್ದುಪಡಿಯಾಯಿತು. ಹೀಗಾಗಿ ಹೇಳಿಕೆ a ತಪ್ಪು. ಇದು ಜಿ.ಎಸ್.ಟಿ.ಗೆ ದಾರಿ ಮಾಡಿಕೊಟ್ಟಿತು ಮತ್ತು 279A ನೇ ವಿಧಿಯ ಮೂಲಕ ಜಿ.ಎಸ್.ಟಿ. ಮಂಡಳಿಯನ್ನು ಸ್ಥಾಪಿಸಿತು; ಆದ್ದರಿಂದ b ಮತ್ತು c ಸರಿ.

  7. SDA Jan 2026 · P1 · Q11 · Indian Constitution & Polity · Constitution & Rights

    Read the statements with regard to the Directive Principles of State Policy : a. The Directive Principles of State Policy are incorporated in Part IV of the Constitution. b. The Directive Principles of State Policy are legally enforceable. c. The Directive Principles of State Policy are legally justiciable. Identify the correct statement/s :

    1. Only a
    2. b and c
    3. Only b
    4. a and b

    ಕೆಳಗೆ ನೀಡಿರುವ ರಾಜ್ಯ ನೀತಿ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಓದಿ : a. ಭಾರತ ಸಂವಿಧಾನದ IV ನೇ ಭಾಗದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಸೇರಿಸಲಾಗಿದೆ. b. ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಕಾನೂನಿನ ಮೂಲಕ ಅನುಷ್ಠಾನಗೊಳಿಸಬಹುದು. c. ರಾಜ್ಯ ನೀತಿ ನಿರ್ದೇಶಕ ತತ್ವಗಳು ನ್ಯಾಯ ರಕ್ಷಿತವಾದವುಗಳು. ಸರಿಯಾದ ಹೇಳಿಕೆಗಳನ್ನು ಗುರುತಿಸಿ :

    1. a ಮಾತ್ರ
    2. b ಮತ್ತು c
    3. b ಮಾತ್ರ
    4. a ಮತ್ತು b
    Show answer

    Answer: (1) Only a

    ಉತ್ತರ: (1) a ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  8. SDA Jan 2026 · P1 · Q12 · Indian Constitution & Polity · Constitution & Rights

    Consider the following statements with regard to the Government of India Act, 1935 : a. The Act divided the powers between the Centre and the Provinces. b. The Act provided for the adoption of diarchy at the Centre. c. The Act introduced Universal Adult Franchise. d. The Act provided for the establishment of the Reserve Bank of India. Identify the correct statements :

    1. a, b and c
    2. a, b and d
    3. a, c and d
    4. b, c and d

    ಭಾರತ ಸರ್ಕಾರದ ಕಾಯ್ದೆ, 1935 ರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. a. ಕಾಯ್ದೆಯು ಕೇಂದ್ರ ಮತ್ತು ಪ್ರಾಂತ್ಯಗಳ ನಡುವೆ ಅಧಿಕಾರ ವಿಭಜನೆಯನ್ನು ಮಾಡಿತು. b. ಕಾಯ್ದೆಯು ಕೇಂದ್ರದಲ್ಲಿ ದ್ವಿ-ಸರ್ಕಾರವನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಿತು. c. ಕಾಯ್ದೆಯು ಸಾರ್ವತ್ರಿಕ ಮತದಾನ ಹಕ್ಕನ್ನು ಪರಿಚಯಿಸಿತು. d. ಕಾಯ್ದೆಯು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಾಪನೆಗೆ ಅವಕಾಶ ನೀಡಿತು. ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ :

    1. a, b ಮತ್ತು c
    2. a, b ಮತ್ತು d
    3. a, c ಮತ್ತು d
    4. b, c ಮತ್ತು d
    Show answer

    Answer: (2) a, b and d

    ಉತ್ತರ: (2) a, b ಮತ್ತು d

    Explanation: open it in the practice app. It needs the ₹149 All-in-One Pass: one payment for every exam on the site.

  9. SDA Feb 2026 · P1 · Q63 · Indian Constitution & Polity · Constitution & Rights

    Which of the following statements is not a characteristic of a federal system?

    1. The Supremacy of the Constitution
    2. Rigid Constitution
    3. There is no decentralization of power
    4. Independent judiciary

    ಕೆಳಗಿನ ಹೇಳಿಕೆಗಳಲ್ಲಿ ಯಾವುದು ಒಕ್ಕೂಟ (ಸಂಯುಕ್ತ) ವ್ಯವಸ್ಥೆಯ ಲಕ್ಷಣವಲ್ಲ?

    1. ಸಂವಿಧಾನದ ಶ್ರೇಷ್ಠತೆ
    2. ಕಠಿಣ ಸಂವಿಧಾನ
    3. ಅಧಿಕಾರದ ವಿಕೇಂದ್ರೀಕರಣವಿರುವುದಿಲ್ಲ
    4. ಸ್ವತಂತ್ರ ನ್ಯಾಯಾಂಗ
    Show answer

    Answer: (3) There is no decentralization of power

    ಉತ್ತರ: (3) ಅಧಿಕಾರದ ವಿಕೇಂದ್ರೀಕರಣವಿರುವುದಿಲ್ಲ

    Explanation: open it in the practice app. It needs the ₹149 All-in-One Pass: one payment for every exam on the site.

  10. SDA Feb 2026 · P1 · Q64 · Indian Constitution & Polity · Constitution & Rights

    Match the following: List-I (Rights) — List-II (Articles) (a) Right to Constitutional Remedies — (i) Articles 25 - 28 (b) Right to Freedom of Religion — (ii) Article 32 (c) Right Against Exploitation — (iii) Articles 14 - 18 (d) Right to Equality — (iv) Articles 23 - 24 Codes:

    1. a-iii, b-iv, c-i, d-ii
    2. a-iv, b-i, c-ii, d-iii
    3. a-ii, b-i, c-iv, d-iii
    4. a-i, b-ii, c-iv, d-iii

    ಹೊಂದಿಸಿ ಬರೆಯಿರಿ: ಪಟ್ಟಿ-I (ಹಕ್ಕುಗಳು) — ಪಟ್ಟಿ-II (ವಿಧಿಗಳು) (a) ಸಂವಿಧಾನಾತ್ಮಕ ಪರಿಹಾರಗಳ ಹಕ್ಕು — (i) 25 - 28 ನೇ ವಿಧಿಗಳು (b) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು — (ii) 32 ನೇ ವಿಧಿ (c) ಶೋಷಣೆಯ ವಿರುದ್ಧದ ಹಕ್ಕು — (iii) 14 - 18 ನೇ ವಿಧಿಗಳು (d) ಸಮಾನತೆಯ ಹಕ್ಕು — (iv) 23 - 24 ನೇ ವಿಧಿಗಳು ಸಂಕೇತಗಳು :

    1. a-iii, b-iv, c-i, d-ii
    2. a-iv, b-i, c-ii, d-iii
    3. a-ii, b-i, c-iv, d-iii
    4. a-i, b-ii, c-iv, d-iii
    Show answer

    Answer: (3) a-ii, b-i, c-iv, d-iii

    Explanation: open it in the practice app. It needs the ₹149 All-in-One Pass: one payment for every exam on the site.

  11. SDA Feb 2026 · P1 · Q67 · Indian Constitution & Polity · Constitution & Rights

    According to Article 368 of Indian Constitution, changes in which of the following is not considered as an Amendment to Indian Constitution?

    1. Election process of President of India
    2. Provisions related to Supreme Court and High Court
    3. Any of the lists in the Seventh Schedule
    4. Any entry in the Second Schedule

    ಭಾರತ ಸಂವಿಧಾನದ ವಿಧಿ 368ರ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದರಲ್ಲಿನ ಬದಲಾವಣೆಯನ್ನು ಭಾರತದ ಸಂವಿಧಾನಕ್ಕೆ ತಿದ್ದುಪಡಿ ಎಂದು ಪರಿಗಣಿಸಲಾಗುವುದಿಲ್ಲ?

    1. ಭಾರತದ ರಾಷ್ಟ್ರಪತಿಗಳ ಚುನಾವಣಾ ಪ್ರಕ್ರಿಯೆ
    2. ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳಿಗೆ ಸಂಬಂಧಿಸಿದ ನಿಬಂಧನೆಗಳು
    3. 7ನೇ ಪರಿಚ್ಛೇದದಲ್ಲಿರುವ ಯಾವುದೇ ಪಟ್ಟಿ
    4. 2ನೇ ಪರಿಚ್ಛೇದದಲ್ಲಿ ನಮೂದಾಗಿರುವ ಯಾವುದೇ ಅಂಶ
    Show answer

    Answer: (4) Any entry in the Second Schedule

    ಉತ್ತರ: (4) 2ನೇ ಪರಿಚ್ಛೇದದಲ್ಲಿ ನಮೂದಾಗಿರುವ ಯಾವುದೇ ಅಂಶ

    Explanation: open it in the practice app. It needs the ₹149 All-in-One Pass: one payment for every exam on the site.

  12. SDA Feb 2026 · P1 · Q69 · Indian Constitution & Polity · Constitution & Rights

    Which of the following Directive Principles of State Policy has been added by 42nd Amendment to the Constitution?

    1. Organise village panchayats
    2. Organise animal husbandry
    3. To secure opportunities for healthy development of children
    4. To prohibit the slaughter of cows

    42ನೇ ತಿದ್ದುಪಡಿಯ ಮೂಲಕ ಈ ಕೆಳಗಿನ ಯಾವ ರಾಜ್ಯ ನೀತಿಯ ನಿರ್ದೇಶಕ ತತ್ವವನ್ನು ಸಂವಿಧಾನಕ್ಕೆ ಸೇರಿಸಲಾಗಿದೆ?

    1. ಗ್ರಾಮ ಪಂಚಾಯ್ತಿಗಳನ್ನು ಸಂಘಟಿಸುವುದು.
    2. ಪಶು ಸಂಗೋಪನೆಯನ್ನು ಸಂಘಟಿಸುವುದು.
    3. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅವಕಾಶಗಳನ್ನು ಖಚಿತಪಡಿಸುವುದು.
    4. ಗೋಹತ್ಯೆ ನಿಷೇಧ
    Show answer

    Answer: (3) To secure opportunities for healthy development of children

    ಉತ್ತರ: (3) ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅವಕಾಶಗಳನ್ನು ಖಚಿತಪಡಿಸುವುದು.

    Explanation: open it in the practice app. It needs the ₹149 All-in-One Pass: one payment for every exam on the site.

Union & State Government

  1. FDA Jan 2026 · P1 · Q30 · Indian Constitution & Polity · Union & State Government

    Which of the following statements about Emergency Provisions exercised by the President of India is/are correct? (a) Under Article 352, the President can declare a National Emergency. (b) Under Article 365, the President can impose Presidential Rule on any state. (c) Under Article 356, the President can suspend the fundamental rights of citizens. (d) Article 359 empowers the President to proclaim a Financial Emergency.

    1. (a) and (b) only
    2. (a) only
    3. (c) only
    4. (c) and (d) only

    ಭಾರತದ ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯ ನಿಬಂಧನೆಗಳನ್ನು ಚಲಾಯಿಸುವುದರ ಕುರಿತಾಗಿ ಕೆಳಕಂಡ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ? (a) ಅನುಚ್ಛೇದ 352ರ ಅಡಿಯಲ್ಲಿ ರಾಷ್ಟ್ರಪತಿಯವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಬಹುದು. (b) ಅನುಚ್ಛೇದ 365ರ ಅಡಿಯಲ್ಲಿ ರಾಷ್ಟ್ರಪತಿಯವರು ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬಹುದು. (c) ಅನುಚ್ಛೇದ 356ರ ಅಡಿಯಲ್ಲಿ ರಾಷ್ಟ್ರಪತಿಯವರು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಅಮಾನತ್ತಿನಲ್ಲಿರಿಸಬಹುದು. (d) ಅನುಚ್ಛೇದ 359 ರಾಷ್ಟ್ರಪತಿಯವರಿಗೆ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರ ನೀಡುತ್ತದೆ.

    1. (a) ಮತ್ತು (b) ಮಾತ್ರ
    2. (a) ಮಾತ್ರ
    3. (c) ಮಾತ್ರ
    4. (c) ಮತ್ತು (d) ಮಾತ್ರ
    Show answer

    Answer: (2) (a) only

    ಉತ್ತರ: (2) (a) ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. FDA Jan 2026 · P1 · Q80 · Indian Constitution & Polity · Union & State Government

    Consider the following statements: (a) The Disaster Management Act was passed by the parliament in 2005. (b) The Union Home Minister Acts as the Chairperson of the National Disaster Management Authority (NDMA) (c) The NDMA may not have more than nine members including Vice Chairman. (d) The tenure of the members of NDMA shall be five years. Which of the statements given above are correct?

    1. (a), (b) and (c)
    2. (a), (c) and (d)
    3. (b), (c) and (d)
    4. (a), (b), (c) and (d)

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ವಿಪತ್ತು ನಿರ್ವಹಣಾ ಕಾಯ್ದೆಯನ್ನು 2005ರಲ್ಲಿ ಸಂಸತ್ತು ಅಂಗೀಕರಿಸಿತು. (b) ಕೇಂದ್ರ ಗೃಹ ಸಚಿವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. (c) NDMA ಉಪಾಧ್ಯಕ್ಷರನ್ನೊಳಗೊಂಡಂತೆ ಒಂಭತ್ತಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವುದಿಲ್ಲ. (d) NDMA ಸದಸ್ಯರ ಅಧಿಕಾರಾವಧಿ ಐದು ವರ್ಷಗಳು. ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ?

    1. (a), (b) ಹಾಗೂ (c)
    2. (a), (c) ಹಾಗೂ (d)
    3. (b), (c) ಹಾಗೂ (d)
    4. (a), (b), (c) ಹಾಗೂ (d)
    Show answer

    Answer: (2) (a), (c) and (d)

    ಉತ್ತರ: (2) (a), (c) ಹಾಗೂ (d)

    Explanation: open it in the practice app. It needs the ₹149 All-in-One Pass: one payment for every exam on the site.

  3. FDA Jan 2026 · P1 · Q93 · Indian Constitution & Polity · Union & State Government

    Find the correct pair from the following: List-I (Interstate River Disputes) — List-II (States Involved) (a) Krishna Water Disputes Tribunal — Karnataka, Telangana and Tamil Nadu (b) Cauvery Water Disputes Tribunal — Karnataka, Kerala, Tamil Nadu and Puducherry (c) Godavari Water Disputes Tribunal — Maharashtra, Karnataka and Goa (d) Mahadayi Water Disputes Tribunal — Goa, Karnataka and Maharashtra Codes:

    1. (a) and (b) are correct
    2. (b) and (d) are correct
    3. (a) and (c) are correct
    4. (b) and (c) are correct

    ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರುತಿಸಿ. ಪಟ್ಟಿ-I (ಅಂತರರಾಜ್ಯ ಜಲವಿವಾದಗಳು) — ಪಟ್ಟಿ-II (ಸಂಬಂಧಿಸಿದ ರಾಜ್ಯಗಳು) (a) ಕೃಷ್ಣ ಜಲವಿವಾದ ನ್ಯಾಯಮಂಡಳಿ — ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು (b) ಕಾವೇರಿ ಜಲವಿವಾದ ನ್ಯಾಯಮಂಡಳಿ — ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ (c) ಗೋದಾವರಿ ಜಲವಿವಾದ ನ್ಯಾಯಮಂಡಳಿ — ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ (d) ಮಹದಾಯಿ ಜಲವಿವಾದ ನ್ಯಾಯಮಂಡಳಿ — ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಕೇತಗಳು:

    1. (a) ಮತ್ತು (b) ಸರಿ
    2. (b) ಮತ್ತು (d) ಸರಿ
    3. (a) ಮತ್ತು (c) ಸರಿ
    4. (b) ಮತ್ತು (c) ಸರಿ
    Show answer

    Answer: (2) (b) and (d) are correct

    ಉತ್ತರ: (2) (b) ಮತ್ತು (d) ಸರಿ

    Explanation: open it in the practice app. It needs the ₹149 All-in-One Pass: one payment for every exam on the site.

  4. SDA Jan 2026 · P1 · Q8 · Indian Constitution & Polity · Union & State Government

    A new All-India Service can be created by :

    1. A resolution of the Rajya Sabha
    2. An act of Parliament
    3. An order of the President
    4. A resolution of the UPSC

    ಹೊಸ ಅಖಿಲ-ಭಾರತ-ಸೇವೆಯನ್ನು ಹೇಗೆ ಸೃಜಿಸಬಹುದು ?

    1. ರಾಜ್ಯಸಭೆಯಲ್ಲಿ ನಿರ್ಣಯದ ಮೂಲಕ
    2. ಸಂಸತ್ತಿನ ಕಾಯ್ದೆಯ ಮೂಲಕ
    3. ರಾಷ್ಟ್ರಪತಿಯವರ ಆದೇಶದ ಮೇರೆಗೆ
    4. ಯು.ಪಿ.ಎಸ್.ಸಿ. ಯ ಆದೇಶದ ಮೇರೆಗೆ
    Show answer

    Answer: (1) A resolution of the Rajya Sabha

    ಉತ್ತರ: (1) ರಾಜ್ಯಸಭೆಯಲ್ಲಿ ನಿರ್ಣಯದ ಮೂಲಕ

    Under Article 312, a new All-India Service can be created only after the Rajya Sabha passes a resolution, supported by two-thirds of the members present and voting, declaring it necessary in the national interest; Parliament then sets it up by law. The Rajya Sabha resolution is the decisive special step, so KEA keys option 1. Neither the President nor UPSC can create a service.

    ಸಂವಿಧಾನದ 312 ನೇ ವಿಧಿಯ ಪ್ರಕಾರ, ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವೆಂದು ರಾಜ್ಯಸಭೆಯು ಹಾಜರಿದ್ದು ಮತ ಚಲಾಯಿಸಿದ ಸದಸ್ಯರ ಮೂರನೇ ಎರಡರಷ್ಟು ಬಹುಮತದಿಂದ ನಿರ್ಣಯ ಅಂಗೀಕರಿಸಿದ ನಂತರವೇ ಹೊಸ ಅಖಿಲ ಭಾರತ ಸೇವೆಯನ್ನು ಸೃಷ್ಟಿಸಬಹುದು; ನಂತರ ಸಂಸತ್ತು ಕಾನೂನಿನ ಮೂಲಕ ಅದನ್ನು ಸ್ಥಾಪಿಸುತ್ತದೆ. ರಾಜ್ಯಸಭೆಯ ನಿರ್ಣಯವೇ ನಿರ್ಣಾಯಕ ವಿಶೇಷ ಹಂತವಾದ್ದರಿಂದ ಕೆಇಎ ಆಯ್ಕೆ 1 ನ್ನು ಸರಿ ಎಂದಿದೆ. ರಾಷ್ಟ್ರಪತಿ ಅಥವಾ ಯು.ಪಿ.ಎಸ್.ಸಿ. ಸೇವೆಯನ್ನು ಸೃಷ್ಟಿಸಲಾರರು.

  5. SDA Jan 2026 · P1 · Q13 · Indian Constitution & Polity · Union & State Government

    Who among the following Vice Presidents of India were elected unopposed ?

    1. Dr. S. Radhakrishnan
    2. Dr. Shankar Dayal Sharma
    3. Dr. Zakir Husain
    4. Jagdeep Dhankhar

    ಕೆಳಗೆ ಕೊಟ್ಟಿರುವ ಭಾರತದ ಉಪರಾಷ್ಟ್ರಪತಿಗಳಲ್ಲಿ ಅವಿರೋಧವಾಗಿ ಚುನಾಯಿತರಾದವರು ಯಾರು ?

    1. ಡಾ. ಎಸ್. ರಾಧಾಕೃಷ್ಣನ್
    2. ಡಾ. ಶಂಕರ ದಯಾಳ್ ಶರ್ಮಾ
    3. ಡಾ. ಝಾಕೀರ್ ಹುಸೇನ
    4. ಜಗದೀಪ್ ಧನಕರ್
    Show answer

    Answer: (1) Dr. S. Radhakrishnan

    ಉತ್ತರ: (1) ಡಾ. ಎಸ್. ರಾಧಾಕೃಷ್ಣನ್

    Explanation: open it in the practice app. It needs the ₹149 All-in-One Pass: one payment for every exam on the site.

  6. SDA Jan 2026 · P1 · Q14 · Indian Constitution & Polity · Union & State Government

    Consider the following statements with regard to India’s Central Legislature : a. Article 79 describes the constitution of the Union Legislature. b. The Union Legislature is also known as Parliament. c. In the Union Legislature, the Upper House is more powerful than the Lower House. d. In the Union Legislature, both the Houses are represented by the people of the country. Which of the statements given above are correct ?

    1. Only a and b
    2. Only a and c
    3. Only a, b and d
    4. Only a, b and c

    ಭಾರತದ ಕೇಂದ್ರ ಶಾಸಕಾಂಗಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ. a. ಸಂವಿಧಾನದ 79ನೇ ವಿಧಿಯು ಕೇಂದ್ರ ಶಾಸಕಾಂಗದ ರಚನೆಯ ಬಗ್ಗೆ ವಿವರಿಸುತ್ತದೆ. b. ಕೇಂದ್ರ ಶಾಸಕಾಂಗವು ‘ಸಂಸತ್ತು’ ಎಂದೂ ಕರೆಯಲ್ಪಡುತ್ತದೆ. c. ಕೇಂದ್ರ ಶಾಸಕಾಂಗಲ್ಲಿ ಮೇಲ್ಮನೆಯು ಕೆಳಮನೆಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. d. ಕೇಂದ್ರ ಶಾಸಕಾಂಗದಲ್ಲಿ ಎರಡೂ ಸದನಗಳು ದೇಶದ ಜನತೆಯನ್ನು ಪ್ರತಿನಿಧಿಸಲ್ಪಡುತ್ತದೆ. ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು ?

    1. a ಮತ್ತು b ಮಾತ್ರ
    2. a ಮತ್ತು c ಮಾತ್ರ
    3. a, b ಮತ್ತು d ಮಾತ್ರ
    4. a, b ಮತ್ತು c ಮಾತ್ರ
    Show answer

    Answer: (1) Only a and b

    ಉತ್ತರ: (1) a ಮತ್ತು b ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  7. SDA Feb 2026 · P1 · Q68 · Indian Constitution & Polity · Union & State Government

    In which of the following periods, there existed a coalition government at the centre?

    1. 1952 - 57
    2. 1977 - 79
    3. 1980 - 84
    4. 1984 - 89

    ಈ ಕೆಳಗಿನ ಯಾವ ಅವಧಿಯಲ್ಲಿ ಕೇಂದ್ರ ಸರ್ಕಾರವು ಸಮ್ಮಿಶ್ರ ಸರ್ಕಾರವಾಗಿತ್ತು?

    1. 1952 - 57
    2. 1977 - 79
    3. 1980 - 84
    4. 1984 - 89
    Show answer

    Answer: (2) 1977 - 79

    Explanation: open it in the practice app. It needs the ₹149 All-in-One Pass: one payment for every exam on the site.

  8. SDA Feb 2026 · P1 · Q96 · Indian Constitution & Polity · Union & State Government

    The three-language formula for language learning was recommended by

    1. Mudhaliar Commission
    2. Radhakrishnan Commission
    3. Adiseshiah Review Committee
    4. Kothari Education Commission

    ಮೂರು ಭಾಷೆಗಳ ಕಲಿಕಾ ಸೂತ್ರವನ್ನು ಶಿಫಾರಸ್ಸು ಮಾಡಿದ್ದು ______

    1. ಮುದಲಿಯಾರ್ ಆಯೋಗ
    2. ರಾಧಾಕೃಷ್ಣನ್ ಆಯೋಗ
    3. ಆದಿಶೇಷಯ್ಯ ಸಮೀಕ್ಷಾ ಸಮಿತಿ
    4. ಕೊಠಾರಿ ಶಿಕ್ಷಣ ಆಯೋಗ
    Show answer

    Answer: (4) Kothari Education Commission

    ಉತ್ತರ: (4) ಕೊಠಾರಿ ಶಿಕ್ಷಣ ಆಯೋಗ

    Explanation: open it in the practice app. It needs the ₹149 All-in-One Pass: one payment for every exam on the site.

  9. SDA Feb 2026 · P1 · Q99 · Indian Constitution & Polity · Union & State Government

    What is the primary role of civil society in democratic governance? Choose the correct option.

    1. Implementing government programmes
    2. Holds the state accountable
    3. Replacing elected representatives in delivering services
    4. Framing economic policies independent of the legislature

    ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ನಾಗರಿಕ ಸಮಾಜದ ಪ್ರಮುಖ ಪಾತ್ರವೇನು? ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

    1. ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು
    2. ರಾಜ್ಯವನ್ನು ಹೊಣೆಗಾರನನ್ನಾಗಿಸುವುದು
    3. ವಿತರಣಾ ಸೇವೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಬದಲಾಯಿಸುವುದು
    4. ಶಾಸಕಾಂಗಗಳಿಂದ ಸ್ವತಂತ್ರವಾದ ಆರ್ಥಿಕ ನೀತಿಗಳನ್ನು ರೂಪಿಸುವುದು.
    Show answer

    Answer: (2) Holds the state accountable

    ಉತ್ತರ: (2) ರಾಜ್ಯವನ್ನು ಹೊಣೆಗಾರನನ್ನಾಗಿಸುವುದು

    Explanation: open it in the practice app. It needs the ₹149 All-in-One Pass: one payment for every exam on the site.

Judiciary & Constitutional Bodies

  1. FDA Jan 2026 · P1 · Q29 · Indian Constitution & Polity · Judiciary & Constitutional Bodies

    Consider the following statements with reference to the Independence of State Public Service Commission (a) Chairpersons and members can only be removed by the President on specific grounds after a Supreme Court inquiry. (b) Their salaries, allowances and pensions are determined by the Governor but cannot be changed to their disadvantage during their term. (c) They are ineligible for other Government jobs, limiting potential pressure or inducement. (d) While appointed by the Governor, the removal process is insulated, emphasizing their independent role. How many of the above statements is/are correct?

    1. All the four statements are correct
    2. Only three statements are correct
    3. Only two statements are correct
    4. Only one statement is correct

    ರಾಜ್ಯ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಅಧ್ಯಕ್ಷರು ಮತ್ತು ಸದಸ್ಯರನ್ನು ಸುಪ್ರೀಂಕೋರ್ಟ್ ವಿಚಾರಣೆಯ ನಂತರ ನಿರ್ದಿಷ್ಟ ಆಧಾರದ ಮೇಲೆ ಮಾತ್ರ ರಾಷ್ಟ್ರಪತಿಗಳು ತೆಗೆದು ಹಾಕಬಹುದು. (b) ಅವರ ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳನ್ನು ರಾಜ್ಯಪಾಲರು ನಿರ್ಧರಿಸುತ್ತಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಅವರಿಗೆ ಅನಾನುಕೂಲವಾಗುವಂತೆ ಬದಲಾಯಿಸಲಾಗುವುದಿಲ್ಲ. (c) ಅವರ ಮೇಲಿನ ಒತ್ತಡ ಅಥವಾ ಪ್ರಚೋದನೆಗಳನ್ನು ಮಿತಿಗೊಳಿಸುವುದಕ್ಕಾಗಿ ಅವರು ಯಾವುದೇ ಸರ್ಕಾರಿ ಉದ್ಯೋಗಗಳಿಗೆ ಅನರ್ಹರಾಗಿದ್ದಾರೆ. (d) ಅವರು ರಾಜ್ಯಪಾಲರಿಂದ ನೇಮಕಗೊಂಡರೂ, ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯನ್ನು ಅವರ ಸ್ವತಂತ್ರ ಪಾತ್ರವನ್ನು ಗಮನದಲ್ಲಿರಿಸಿಕೊಂಡು ನಿರೋಧಿಸಲಾಗಿದೆ. ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.
    2. ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
    3. ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ.
    4. ಕೇವಲ ಒಂದು ಹೇಳಿಕೆ ಸರಿಯಾಗಿದೆ.
    Show answer

    Answer: (2) Only three statements are correct

    ಉತ್ತರ: (2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.

    Explanation: open it in the practice app. It needs the ₹149 All-in-One Pass: one payment for every exam on the site.

  2. FDA Jan 2026 · P1 · Q91 · Indian Constitution & Polity · Judiciary & Constitutional Bodies

    Read the following statements regarding Tribunals in Indian Constitution. (a) Original constitution provides for the establishment of Tribunals. (b) Tribunals are mentioned in Part – XIV – A. (c) Articles 323 A and 323 B deal with Tribunals. (d) The Parliament passed the Administrative Tribunals Act in 1985. Identify the correct statements.

    1. (a), (b) and (c)
    2. (b), (c) and (d)
    3. (b) and (c) only
    4. (c) and (d) only

    ಭಾರತ ಸಂವಿಧಾನದಲ್ಲಿನ ನ್ಯಾಯಮಂಡಳಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿ. (a) ಮೂಲ ಸಂವಿಧಾನವು ನ್ಯಾಯ ಮಂಡಳಿಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ. (b) ಭಾಗ XIV-A ನಲ್ಲಿ ನ್ಯಾಯಮಂಡಳಿಗಳ ಪ್ರಸ್ತಾಪವಿದೆ. (c) 323 A ಮತ್ತು 323 B ವಿಧಿಗಳು ನ್ಯಾಯಮಂಡಳಿಗೆ ಸಂಬಂಧಿಸಿವೆ. (d) ಆಡಳಿತಾತ್ಮಕ ನ್ಯಾಯ ಮಂಡಳಿಗಳ ಕಾಯ್ದೆಯನ್ನು ಸಂಸತ್ತು 1985ರಲ್ಲಿ ಅಂಗೀಕರಿಸಿದೆ. ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ.

    1. (a), (b) ಮತ್ತು (c)
    2. (b), (c) ಮತ್ತು (d)
    3. (b) ಮತ್ತು (c) ಮಾತ್ರ
    4. (c) ಮತ್ತು (d) ಮಾತ್ರ
    Show answer

    Answer: (2) (b), (c) and (d)

    ಉತ್ತರ: (2) (b), (c) ಮತ್ತು (d)

    Explanation: open it in the practice app. It needs the ₹149 All-in-One Pass: one payment for every exam on the site.

  3. FDA Jan 2026 · P1 · Q99 · Indian Constitution & Polity · Judiciary & Constitutional Bodies

    Which of the following statements is/are INCORRECT with respect to Special Intensive Revision (SIR)? (a) Every year Election Commission of India conducts this exercise. (b) The names of new voters who are aged 18+ are being included in the voters list. (c) It also intends to remove the names of illegal foreign immigrants. (d) Election Commission of India can conduct SIR exercise if the concerned states give consent.

    1. (a) and (b)
    2. (b) and (c)
    3. (c) and (d)
    4. (a) and (d)

    ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ? (a) ಭಾರತದ ಚುನಾವಣಾ ಆಯೋಗವು ಪ್ರತಿವರ್ಷ ಈ ಪ್ರಕ್ರಿಯೆಯನ್ನು ನಡೆಸುತ್ತದೆ. (b) 18 ವರ್ಷ ಮೇಲ್ಪಟ್ಟ ಹೊಸ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲಾಗುತ್ತದೆ. (c) ಇದು ವಿದೇಶೀ ಅಕ್ರಮ ವಲಸಿಗರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶವನ್ನು ಹೊಂದಿದೆ. (d) ಆಯಾ ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಭಾರತ ಚುನಾವಣಾ ಆಯೋಗ ಎಸ್ಐಆರ್ ನಡೆಸಬಹುದು

    1. (a) ಮತ್ತು (b)
    2. (b) ಮತ್ತು (c)
    3. (c) ಮತ್ತು (d)
    4. (a) ಮತ್ತು (d)
    Show answer

    Answer: (4) (a) and (d)

    ಉತ್ತರ: (4) (a) ಮತ್ತು (d)

    Explanation: open it in the practice app. It needs the ₹149 All-in-One Pass: one payment for every exam on the site.

  4. SDA Jan 2026 · P1 · Q1 · Indian Constitution & Polity · Judiciary & Constitutional Bodies

    Which among the following Tribunal/Commission settles disputes related to recruitment and all service matters of Central Government employees ?

    1. Central Administrative Tribunal
    2. Union Public Service Commission
    3. State Administrative Tribunal
    4. Securities Appellate Tribunal

    ಕೇಂದ್ರೀಯ ಸೇವೆಯ ಅಧಿಕಾರಿಗಳ ನೇಮಕಾತಿ ಮತ್ತು ಸೇವೆಗೆ ಸಂಬಂಧಿಸಿದ ವಿವಾದಗಳನ್ನು ತೀರ್ಮಾನಿಸುವ ನ್ಯಾಯಮಂಡಳಿ/ಆಯೋಗ ಯಾವುದು ?

    1. ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ
    2. ಕೇಂದ್ರ ಲೋಕಸೇವಾ ಆಯೋಗ
    3. ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ
    4. ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ
    Show answer

    Answer: (1) Central Administrative Tribunal

    ಉತ್ತರ: (1) ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ

    The Central Administrative Tribunal (CAT), set up in 1985 under the Administrative Tribunals Act, 1985 (made under Article 323A), decides disputes on recruitment and service conditions of Central Government employees. UPSC only conducts recruitment and advises; State Administrative Tribunals deal with State employees; the Securities Appellate Tribunal hears appeals against SEBI orders.

    ಸಂವಿಧಾನದ 323A ನೇ ವಿಧಿಯಡಿ ರೂಪಿಸಿದ ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯ್ದೆ, 1985 ರ ಅನ್ವಯ 1985 ರಲ್ಲಿ ಸ್ಥಾಪಿತವಾದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಕೇಂದ್ರ ಸರ್ಕಾರಿ ನೌಕರರ ನೇಮಕಾತಿ ಮತ್ತು ಸೇವಾ ವಿವಾದಗಳನ್ನು ತೀರ್ಮಾನಿಸುತ್ತದೆ. ಯು.ಪಿ.ಎಸ್.ಸಿ. ನೇಮಕಾತಿ ನಡೆಸಿ ಸಲಹೆ ನೀಡುತ್ತದೆ ಮಾತ್ರ; ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ರಾಜ್ಯ ನೌಕರರಿಗೆ ಸಂಬಂಧಿಸಿದ್ದು; ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಸೆಬಿ ಆದೇಶಗಳ ವಿರುದ್ಧದ ಮೇಲ್ಮನವಿಗಳನ್ನು ಆಲಿಸುತ್ತದೆ.

  5. SDA Jan 2026 · P1 · Q6 · Indian Constitution & Polity · Judiciary & Constitutional Bodies

    Read the following statements regarding the National Commission for Scheduled Tribes (STs) : a. The Commission is a constitutional body. b. Article 338A provides for the establishment of the Commission. c. The separate National Commission for STs came into existence in 2004. d. The President of India is the Chairperson of the Commission. Identify the correct statements :

    1. a, c and d
    2. a, b and d
    3. a, b and c
    4. b, c and d

    ಅನುಸೂಚಿತ ಬುಡಕಟ್ಟುಗಳ (STs) ರಾಷ್ಟ್ರೀಯ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿ a. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ. b. 338A ನೇ ವಿಧಿ ಆಯೋಗದ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ. c. ಪ್ರತ್ಯೇಕ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು. d. ಭಾರತದ ರಾಷ್ಟ್ರಪತಿಗಳು ಆಯೋಗದ ಅಧ್ಯಕ್ಷರಾಗಿರುತ್ತಾರೆ. ಸರಿಯಾದ ಹೇಳಿಕೆಗಳನ್ನು ಗುರುತಿಸಿ :

    1. a, c ಮತ್ತು d
    2. a, b ಮತ್ತು d
    3. a, b ಮತ್ತು c
    4. b, c ಮತ್ತು d
    Show answer

    Answer: (3) a, b and c

    ಉತ್ತರ: (3) a, b ಮತ್ತು c

    The 89th Amendment Act, 2003 inserted Article 338A and bifurcated the old joint commission, so a separate National Commission for STs, a constitutional body, came into existence in 2004. Statement d is wrong: the Commission has its own Chairperson, Vice-Chairperson and three members, all appointed by the President; the President is not its Chairperson.

    2003 ರ 89ನೇ ತಿದ್ದುಪಡಿ ಕಾಯ್ದೆಯು 338A ನೇ ವಿಧಿಯನ್ನು ಸೇರಿಸಿ ಹಳೆಯ ಜಂಟಿ ಆಯೋಗವನ್ನು ವಿಭಜಿಸಿತು; ಹೀಗಾಗಿ ಸಾಂವಿಧಾನಿಕ ಸಂಸ್ಥೆಯಾದ ಪ್ರತ್ಯೇಕ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಹೇಳಿಕೆ d ತಪ್ಪು: ಆಯೋಗಕ್ಕೆ ಪ್ರತ್ಯೇಕ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮೂವರು ಸದಸ್ಯರಿದ್ದು, ಅವರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ; ರಾಷ್ಟ್ರಪತಿಗಳು ಅಧ್ಯಕ್ಷರಲ್ಲ.

  6. SDA Feb 2026 · P1 · Q41 · Indian Constitution & Polity · Judiciary & Constitutional Bodies

    Which of the following is/are the constitutional bodies? (a) NITI Aayog (b) Finance Commission (c) GST Council (d) National Medical Commission

    1. (a) and (d)
    2. (a) and (b)
    3. (b) only
    4. (b) and (c)

    ಈ ಕೆಳಗಿನವುಗಳಲ್ಲಿ ಯಾವುದು/ಯಾವುವು ಸಾಂವಿಧಾನಿಕ ಸಂಸ್ಥೆಯಾಗಿದೆ/ವೆ? (a) ನೀತಿ ಆಯೋಗ (b) ಹಣಕಾಸು ಆಯೋಗ (c) GST ಮಂಡಳಿ (d) ರಾಷ್ಟ್ರೀಯ ವೈದ್ಯಕೀಯ ಆಯೋಗ

    1. (a) ಮತ್ತು (d)
    2. (a) ಮತ್ತು (b)
    3. (b) ಮಾತ್ರ
    4. (b) ಮತ್ತು (c)
    Show answer

    Answer: (4) (b) and (c)

    ಉತ್ತರ: (4) (b) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  7. SDA Feb 2026 · P1 · Q61 · Indian Constitution & Polity · Judiciary & Constitutional Bodies

    Read the statements with regard to High Court mentioned below: (a) The Chief Justice of a High Court can appoint officers and staff of the High Court without any interference from the executive. (b) The Judges of a High Court are appointed by the President. (c) The President can transfer a Judge from one High Court to another after consulting the Chief Justice of India. (d) A Judge of a High Court cannot be removed from his office. Identify the correct statements

    1. (a), (b) and (c)
    2. (a), (c) and (d)
    3. (b), (c) and (d)
    4. (a), (b) and (d)

    ಕೆಳಗೆ ನೀಡಿರುವ ಹೈಕೋರ್ಟ್‌ಗೆ ಸಂಬಂಧಿಸಿದ ಹೇಳಿಕೆಗಳನ್ನು ಓದಿ. (a) ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಹೈಕೋರ್ಟ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಾರ್ಯಾಂಗದ ಹಸ್ತಕ್ಷೇಪವಿಲ್ಲದೆ ನೇಮಿಸಬಹುದು. (b) ಹೈಕೋರ್ಟ್‌ನ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. (c) ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಡನೆ ಸಮಾಲೋಚನೆ ಮಾಡಿ, ಹೈಕೋರ್ಟ್‌ನ ನ್ಯಾಯಾಧೀಶರನ್ನು ಒಂದು ಹೈಕೋರ್ಟ್‌ನಿಂದ ಬೇರೆ ಹೈಕೋರ್ಟ್‌ಗೆ ವರ್ಗಾಯಿಸಬಹುದು. (d) ಹೈಕೋರ್ಟ್‌ನ ನ್ಯಾಯಾಧೀಶರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗುವುದಿಲ್ಲ. ಸರಿಯಾದ ಹೇಳಿಕೆಗಳನ್ನು ಗುರುತಿಸಿ.

    1. (a), (b) ಮತ್ತು (c)
    2. (a), (c) ಮತ್ತು (d)
    3. (b), (c) ಮತ್ತು (d)
    4. (a), (b) ಮತ್ತು (d)
    Show answer

    Answer: (1) (a), (b) and (c)

    ಉತ್ತರ: (1) (a), (b) ಮತ್ತು (c)

    Explanation: open it in the practice app. It needs the ₹149 All-in-One Pass: one payment for every exam on the site.

  8. SDA Feb 2026 · P1 · Q66 · Indian Constitution & Polity · Judiciary & Constitutional Bodies

    Which of the following options regarding NHRC is correct?

    1. Chairman should be a retired Chief Justice of Supreme Court of India or retired Chief Justice of a High Court
    2. Chairman is appointed by the President on the recommendation of Prime Minister and his Council of Ministers
    3. It can amend Constitution to safeguard human rights
    4. It promotes research on human rights

    NHRC ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಆಯ್ಕೆಯು ಸರಿಯಾಗಿದೆ?

    1. ಇದರ ಅಧ್ಯಕ್ಷರು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನಿವೃತ್ತ ನ್ಯಾಯಾಧೀಶರಾಗಿರಬೇಕು ಅಥವಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರಬೇಕು.
    2. ಅಧ್ಯಕ್ಷರನ್ನು ರಾಷ್ಟ್ರಪತಿಗಳು ಪ್ರಧಾನಿ ಮತ್ತು ಅವರ ಮಂತ್ರಿಮಂಡಲದ ಶಿಫಾರಸ್ಸಿನಂತೆ ನೇಮಿಸುತ್ತಾರೆ.
    3. ಇದು ಮಾನವ ಹಕ್ಕುಗಳ ರಕ್ಷಣೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು.
    4. ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ.
    Show answer

    Answer: (4) It promotes research on human rights

    ಉತ್ತರ: (4) ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

Panchayat Raj & Local Bodies

  1. FDA Jan 2026 · P1 · Q95 · Indian Constitution & Polity · Panchayat Raj & Local Bodies

    Arrange the following in the chronological order. (a) G.V.K. Rao Committee. (b) Ashok Mehta Committee. (c) Provisions of the Panchayats (Extension to the Scheduled Areas) Act. (d) 73rd Constitutional Amendment Act. Select the correct answer using the codes given below.

    1. (c), (b), (a), (d)
    2. (b), (a), (d), (c)
    3. (b), (a), (c), (d)
    4. (a), (c), (d), (b)

    ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ. (a) ಜಿ.ವಿ.ಕೆ. ರಾವ್ ಸಮಿತಿ (b) ಅಶೋಕ ಮೆಹ್ತಾ ಸಮಿತಿ (c) ಪಂಚಾಯತ್‌ಗಳ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಿಸುವುದು) ಉಪಬಂಧಗಳ ಕಾಯ್ದೆ. (d) 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ. ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

    1. (c), (b), (a), (d)
    2. (b), (a), (d), (c)
    3. (b), (a), (c), (d)
    4. (a), (c), (d), (b)
    Show answer

    Answer: (2) (b), (a), (d), (c)

    Explanation: open it in the practice app. It needs the ₹149 All-in-One Pass: one payment for every exam on the site.

  2. SDA Jan 2026 · P1 · Q4 · Indian Constitution & Polity · Panchayat Raj & Local Bodies

    The minimum age limit to contest elections in the Local Self-Government is :

    1. 21 years
    2. 25 years
    3. 30 years
    4. 35 years

    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಗತ್ಯವಾದ ಕನಿಷ್ಠ ವಯಸ್ಸು

    1. 21 ವರ್ಷ
    2. 25 ವರ್ಷ
    3. 30 ವರ್ಷ
    4. 35 ವರ್ಷ
    Show answer

    Answer: (1) 21 years

    ಉತ್ತರ: (1) 21 ವರ್ಷ

    Article 243F (panchayats) and Article 243V (municipalities) say a person shall not be disqualified on the ground of age if he or she has attained 21 years. So the minimum age to contest panchayat and municipal elections is 21 years (compared with 25 for MLA/MP in Lok Sabha and 30 for Rajya Sabha/MLC).

    ಸಂವಿಧಾನದ 243F (ಪಂಚಾಯತಿಗಳು) ಮತ್ತು 243V (ನಗರಸ್ಥಳೀಯ ಸಂಸ್ಥೆಗಳು) ನೇ ವಿಧಿಗಳ ಪ್ರಕಾರ 21 ವರ್ಷ ತುಂಬಿದ ವ್ಯಕ್ತಿಯನ್ನು ವಯಸ್ಸಿನ ಕಾರಣಕ್ಕೆ ಅನರ್ಹಗೊಳಿಸುವಂತಿಲ್ಲ. ಆದ್ದರಿಂದ ಪಂಚಾಯತಿ ಮತ್ತು ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು 21 ವರ್ಷ (ಶಾಸಕ/ಲೋಕಸಭಾ ಸದಸ್ಯರಿಗೆ 25, ರಾಜ್ಯಸಭೆ/ವಿಧಾನ ಪರಿಷತ್ತಿಗೆ 30 ವರ್ಷ).

  3. SDA Jan 2026 · P1 · Q10 · Indian Constitution & Polity · Panchayat Raj & Local Bodies

    Who appoints the Municipal Commissioner of the Municipal Corporation ?

    1. The President of India
    2. The Mayor
    3. The Governor
    4. The State Government

    ಮುನ್ಸಿಪಲ್ ಕಾರ್ಪೋರೇಷನ್‌ನ ಮುನ್ಸಿಪಲ್ ಕಮಿಷನರ್‌ರವರನ್ನು ಯಾರು ನೇಮಕ ಮಾಡುತ್ತಾರೆ ?

    1. ಭಾರತದ ರಾಷ್ಟ್ರಪತಿ
    2. ಮೇಯರ್
    3. ರಾಜ್ಯಪಾಲರು
    4. ರಾಜ್ಯ ಸರ್ಕಾರ
    Show answer

    Answer: (4) The State Government

    ಉತ್ತರ: (4) ರಾಜ್ಯ ಸರ್ಕಾರ

    The Municipal Commissioner is the chief executive officer of a Municipal Corporation and is appointed by the State Government, usually from the IAS. The Mayor is the elected (largely ceremonial) head of the corporation; the President and Governor have no role in this appointment.

    ಮುನ್ಸಿಪಲ್ ಆಯುಕ್ತರು ಮಹಾನಗರ ಪಾಲಿಕೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಸಾಮಾನ್ಯವಾಗಿ ಐ.ಎ.ಎಸ್. ಅಧಿಕಾರಿಯನ್ನು ರಾಜ್ಯ ಸರ್ಕಾರ ನೇಮಿಸುತ್ತದೆ. ಮೇಯರ್ ಪಾಲಿಕೆಯ ಚುನಾಯಿತ (ಹೆಚ್ಚಾಗಿ ಔಪಚಾರಿಕ) ಮುಖ್ಯಸ್ಥರು; ಈ ನೇಮಕದಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಪಾತ್ರವಿಲ್ಲ.

  4. SDA Jan 2026 · P1 · Q94 · Indian Constitution & Polity · Panchayat Raj & Local Bodies

    The provisions of the Panchayats (Extension to the Scheduled Areas) Act, 1996 (PESA) is based on recommendations of the ______ Committee.

    1. Balwant Rai Mehta
    2. Ashok Mehta
    3. L.M. Singhvi
    4. Bhuria

    ದಿ ಪ್ರೋವಿಷನ್ಸ್ ಆಫ್ ದಿ ಪಂಚಾಯತ್ಸ್ (ಎಕ್ಸ್ಟೆನ್ಷನ್ ಟು ದಿ ಶೆಡ್ಯೂಲ್ಡ್ ಏರಿಯಾಸ್) ಆಕ್ಟ್ 1996 (PESA) ಇದು ______ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ.

    1. ಬಲವಂತ್ ರಾಯ್ ಮೆಹ್ತಾ
    2. ಅಶೋಕ್ ಮೆಹ್ತಾ
    3. ಎಲ್.ಎಂ. ಸಿಂಘ್ವಿ
    4. ಭೂರಿಯಾ
    Show answer

    Answer: (4) Bhuria

    ಉತ್ತರ: (4) ಭೂರಿಯಾ

    Explanation: open it in the practice app. It needs the ₹149 All-in-One Pass: one payment for every exam on the site.

  5. SDA Jan 2026 · P1 · Q95 · Indian Constitution & Polity · Panchayat Raj & Local Bodies

    ‘Abdul Nazir Sab State Institute for Rural Development and Panchayat Raj’ is located in ______.

    1. Bidar
    2. Mysuru
    3. Gadag
    4. Bengaluru

    ‘ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಧಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ’ ಇರುವ ಸ್ಥಳ ______ .

    1. ಬೀದರ್
    2. ಮೈಸೂರು
    3. ಗದಗ್
    4. ಬೆಂಗಳೂರು
    Show answer

    Answer: (2) Mysuru

    ಉತ್ತರ: (2) ಮೈಸೂರು

    Explanation: open it in the practice app. It needs the ₹149 All-in-One Pass: one payment for every exam on the site.

  6. SDA Feb 2026 · P1 · Q76 · Indian Constitution & Polity · Panchayat Raj & Local Bodies

    According to 'Karnataka Gram Swaraj and Panchayatraj Act', members of a Gram Panchayat may resign to his membership by writing to the following.

    1. Gram Panchayat Development Officer
    2. Adhyaksha of Gram Panchayat
    3. Assistant Commissioner
    4. Executive Officer

    'ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಕಾಯ್ದೆ'ಯ ಪ್ರಕಾರ ಗ್ರಾಮಪಂಚಾಯತ್‌ನ ಸದಸ್ಯರು ಈ ಕೆಳಗಿನವರಿಗೆ ಬರೆದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಬಹುದು.

    1. ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ
    2. ಗ್ರಾಮಪಂಚಾಯತ್ ಅಧ್ಯಕ್ಷರು
    3. ಅಸಿಸ್ಟೆಂಟ್ ಕಮಿಷನರ್
    4. ಕಾರ್ಯನಿರ್ವಾಹಕ ಅಧಿಕಾರಿ
    Show answer

    Answer: (2) Adhyaksha of Gram Panchayat

    ಉತ್ತರ: (2) ಗ್ರಾಮಪಂಚಾಯತ್ ಅಧ್ಯಕ್ಷರು

    Explanation: open it in the practice app. It needs the ₹149 All-in-One Pass: one payment for every exam on the site.

  7. SDA Feb 2026 · P1 · Q77 · Indian Constitution & Polity · Panchayat Raj & Local Bodies

    Expand KTCP.

    1. Karnataka Transparency and Controlled Plan
    2. Karnataka Town and Country Planning
    3. Karnataka Town Controlling Plan
    4. Karnataka Transport Control Plan

    KTCP ಯನ್ನು ವಿಸ್ತರಿಸಿ.

    1. ಕರ್ನಾಟಕ ಟ್ರಾನ್ಸ್‌ಪರೆನ್ಸಿ ಆ್ಯಂಡ್ ಕಂಟ್ರೋಲ್ಡ್ ಪ್ಲ್ಯಾನ್
    2. ಕರ್ನಾಟಕ ಟೌನ್ ಆ್ಯಂಡ್ ಕಂಟ್ರಿ ಪ್ಲ್ಯಾನಿಂಗ್
    3. ಕರ್ನಾಟಕ ಟೌನ್ ಕಂಟ್ರೋಲಿಂಗ್ ಪ್ಲ್ಯಾನ್
    4. ಕರ್ನಾಟಕ ಟ್ರಾನ್ಸ್‌ಪೋರ್ಟ್ ಕಂಟ್ರೋಲ್ ಪ್ಲ್ಯಾನ್
    Show answer

    Answer: (2) Karnataka Town and Country Planning

    ಉತ್ತರ: (2) ಕರ್ನಾಟಕ ಟೌನ್ ಆ್ಯಂಡ್ ಕಂಟ್ರಿ ಪ್ಲ್ಯಾನಿಂಗ್

    Explanation: open it in the practice app. It needs the ₹149 All-in-One Pass: one payment for every exam on the site.

  8. SDA Feb 2026 · P1 · Q78 · Indian Constitution & Polity · Panchayat Raj & Local Bodies

    Who is the Chairperson of Taluk Planning and Development Committee?

    1. Adhyaksha of Taluk Panchayat
    2. Adhyaksha of Zilla Panchayat
    3. Member of Legislative Assembly representing major parts of the Taluk
    4. None of the above

    ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಯಾರು?

    1. ತಾಲೂಕು ಪಂಚಾಯತ್ ಅಧ್ಯಕ್ಷರು
    2. ಜಿಲ್ಲಾ ಪಂಚಾಯತ್ ಅಧ್ಯಕ್ಷರು
    3. ತಾಲೂಕಿನ ಪ್ರಮುಖ ಭಾಗಗಳನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು
    4. ಮೇಲಿನ ಯಾವುದೂ ಅಲ್ಲ
    Show answer

    Answer: (3) Member of Legislative Assembly representing major parts of the Taluk

    ಉತ್ತರ: (3) ತಾಲೂಕಿನ ಪ್ರಮುಖ ಭಾಗಗಳನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು

    Explanation: open it in the practice app. It needs the ₹149 All-in-One Pass: one payment for every exam on the site.

  9. SDA Feb 2026 · P1 · Q79 · Indian Constitution & Polity · Panchayat Raj & Local Bodies

    'Gram Sabha' is defined as

    1. The body consisting of all people of village
    2. The body consisting of persons registered as voters in the electoral rolls relating to a village comprised within the area of Gram Panchayat at the village.
    3. The body consisting of persons of habitations registered as voters in the electoral rolls relating to a village
    4. All of the above

    'ಗ್ರಾಮಸಭೆ'ಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ

    1. ಹಳ್ಳಿಯ ಎಲ್ಲಾ ಜನರನ್ನು ಒಳಗೊಂಡಿರುವ ಮಂಡಳಿ.
    2. ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ.
    3. ಗ್ರಾಮಪಂಚಾಯತಿಯಲ್ಲಿರುವ ಜನವಸತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ಮಂಡಳಿ.
    4. ಮೇಲಿನ ಎಲ್ಲವೂ.
    Show answer

    Answer: (2) The body consisting of persons registered as voters in the electoral rolls relating to a village comprised within the area of Gram Panchayat at the village.

    ಉತ್ತರ: (2) ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ.

    Explanation: open it in the practice app. It needs the ₹149 All-in-One Pass: one payment for every exam on the site.

  10. SDA Feb 2026 · P1 · Q80 · Indian Constitution & Polity · Panchayat Raj & Local Bodies

    At what time is a Gram Panchayat member required to submit a declaration of assets and liabilities?

    1. Only after completing the term
    2. Only when asked by the public
    3. At the time prescribed by Law, usually at the time of election and periodically thereafter.
    4. None of the above

    ಗ್ರಾಮ ಪಂಚಾಯತ್‌ನ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆಯನ್ನು ಯಾವ ಸಮಯದಲ್ಲಿ ಸಲ್ಲಿಸಬೇಕು?

    1. ಅವಧಿ ಪೂರ್ಣಗೊಂಡ ನಂತರ ಮಾತ್ರ
    2. ಸಾರ್ವಜನಿಕರು ಕೇಳಿದಾಗ ಮಾತ್ರ
    3. ಕಾನೂನಿನಲ್ಲಿ ನಿಗದಿ ಪಡಿಸಿದ ಸಮಯದಲ್ಲಿ, ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ
    4. ಮೇಲಿನ ಯಾವುದೂ ಅಲ್ಲ.
    Show answer

    Answer: (3) At the time prescribed by Law, usually at the time of election and periodically thereafter.

    ಉತ್ತರ: (3) ಕಾನೂನಿನಲ್ಲಿ ನಿಗದಿ ಪಡಿಸಿದ ಸಮಯದಲ್ಲಿ, ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ

    Explanation: open it in the practice app. It needs the ₹149 All-in-One Pass: one payment for every exam on the site.